ಕರ್ನಾಟಕಪ್ರಮುಖ ಸುದ್ದಿ

ಆಗಸ್ಟ್ 4-15 : ಲಾಲ್‍ಬಾಗ್‍ನಲ್ಲಿ ಸ್ವಾತಂತ್ರೋತ್ಸವ ಫಲಪುಪ್ಪ ಪ್ರದರ್ಶನ

ಬೆಂಗಳೂರು, ಆಗಸ್ಟ್ 3 : ಲಾಲ್‍ಬಾಗ್‍ನಲ್ಲಿ ಈ ಸಾಲಿನ ಸ್ವಾತಂತ್ರೋತ್ಸವ ಫಲಪುಪ್ಪ ಪ್ರದರ್ಶನವನ್ನು ಆಗಸ್ಟ್ 4 ರಿಂದ 15 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕ ಪ್ರಭಾಷ್ ಚಂದ್ರ ರೇ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷ ಸಹ ಸ್ವಾತಂತ್ರೋತ್ಸವ ಪ್ರಯುಕ್ತ ಲಾಲ್‍ಬಾಗ್‍ನಲ್ಲಿ ಫಲಪುಪ್ಫ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷ 206 ನೇ ಫಲಪುಪ್ಫ ಪ್ರದರ್ಶನವಾಗಿದ್ದು, ಆಗಸ್ಟ್ 4 ರಂದು ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಗಾಜಿನ ಮನೆಯಲ್ಲಿ ಉದ್ಫಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಾಲಿನ ಫಲಪುಪ್ಫ ಪ್ರದರ್ಶನದ ವಿಶೇಷತೆ  ರಾಷ್ಟ್ರಕವಿ ಕುವೆಂಪು ಅವರಿಗೆ ಸಂಬಂಧಿಸಿದಾಗಿದ್ದು, ಕುವೆಂಪು ಸಾಹಿತ್ಯ, ಜೀವನ ಕುರಿತು ಮಕ್ಕಳಿಗೆ ವಿಶೇಷ ಪ್ರಬಂಧ ಸ್ಪರ್ಧೆಯನ್ನು ಆಗಸ್ಟ್ 8 ರಂದು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 5 ರಂದು ಪುಪ್ಪಭಾರತಿ, ತರಕಾರಿ ಕೆತ್ತನೆ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಜಾನೂರು ಒಣ ಹೂವಿನ ಜೋಡಣೆಯ ಕಲೆಗಳ ಸ್ಪರ್ಧೆ ಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಹಿತಿ ಶ್ರೀಮತಿ ಕಮಲಾ ಹಂಪನಾ ಅವರು ಈ ಕಾರ್ಯಕ್ರಮವನ್ನು ಉದ್ಫಾಟಿಸಲಿದ್ದಾರೆ. ಈ ಬಾರಿಯ ಫಲಪುಪ್ಪ ಪ್ರದರ್ಶನ ಅನೇಕ ವಿಶೇಷತೆಗಳು ಮತ್ತು ಹೊಸತನಗಳಿಂದ ಕೂಡಿದ್ದು 3 ರಿಂದ 4 ಲಕ್ಷ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

-ಎನ್.ಬಿ.

Leave a Reply

comments

Related Articles

error: