ಪ್ರಮುಖ ಸುದ್ದಿಮೈಸೂರು

ನ. 12: ಮೈಸೂರಲ್ಲಿ ರಘು ದೀಕ್ಷಿತ್ ಸಂಗೀತ ಕಾರ್ಯಕ್ರಮ

ಮೈಸೂರು ಮೂಲದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಗಾಯಕ, ಗೀತ ರಚನೆಕಾರ, ಸಂಗೀತ ಸಂಯೋಜಕರಾದ ರಘು ದೀಕ್ಷಿತ್ ಅವರು ನವೆಂಬರ್ 12 ರಂದು ‘ಸ್ವರಾನುಭೂತಿ’ ಎಂಬ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಡವರಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಿಸಲು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ (ಎಸ್‍ವಿವೈಎಮ್‍) 2015 ರಲ್ಲಿ ‘ಸ್ವರಾನುಭೂತಿ’ ಕಾರ್ಯಕ್ರಮವನ್ನು ಆರಂಭಿಸಿತ್ತು. ಮೈಸೂರಿನ ಕಲಾಮಂದಿರದಲ್ಲಿ ‘ಸ್ವರಾನುಭೂತಿ-2016’ ನವೆಂಬರ್ 12 ರಂದು ಸಂಜೆ 6 ಗಂಟೆಯಿಂದ 9 ರ ವರೆಗೆ ರಘು ದೀಕ್ಷಿತ್‍ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

Leave a Reply

comments

Related Articles

error: