Uncategorizedಮೈಸೂರು

ಆ.6ರಂದು ಶನೇಶ್ವರ ಸ್ವಾಮಿ ವಾರ್ಷಿಕೋತ್ಸವ : ಗಂಗಾವತಿ ಪ್ರಾಣೇಶ್ ಅವರ ನಗೆ ಹಬ್ಬ

ಮೈಸೂರು,ಆ.3 : ರಾಜೇಂದ್ರ ನಗರದ ಶ್ರೀಶನೇಶ್ವರ ಸ್ವಾಮಿ ದೇವಸ್ಥಾನದ 40ನೇ ವರ್ಷದ ಶ್ರಾವಣ ಮಾಸದ ವಾರ್ಷಿಕ ಮಹೋತ್ಸವದಂಗವಾಗಿ  ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ನಗೆಹಬ್ಬವನ್ನು ಆಯೋಜಿಸಲಾಗಿದೆ ಎಂದು ಕಾರ್ಯದರ್ಶಿ ಬಾನುಪ್ರಕಾಶ್ ತಿಳಿಸಿದರು.

ಆ.6ರ ಸಂಜೆ 6ಕ್ಕೆ ಗಂಟೆಗೆ ಶ್ರೀ ಬೀರಪ್ಪ ಮಹಾಸ್ವಾಮಿ ಆಶೀರ್ವಾದದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪಾಲಿಕೆ ಸದಸ್ಯ ನಟರಾಜ್ ಅಧ್ಯಕ್ಷತೆ ವಹಿಸುವರು. ಶನೇಶ್ವರಸ್ವಾಮಿ ದೇವಸ್ಥಾನದ ಶ್ರೀಚಂದ್ರ ಸ್ವಾಮೀಜಿ ಹಾಗೂ ಚಂದ್ರವನ ಆಶ್ರಮದ ಶ್ರೀತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ಸಾನಿಧ್ಯ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರ್.ಎಸ್.ಎಸ್. ದಕ್ಷಿಣ ಪ್ರಾಂತ ಸಂಘ ಸಂಚಾಲಕ ಜಿ. ವೆಂಕಟರಾಮ್ ಉದ್ಘಾಟಿಸುವರು, ಬಿಜೆಪಿ ಮುಖಂಡರಾದ ಸು.ಮುರುಳಿ, ನರಸಿಂಹಮೂರ್ತಿ, ಜಿ.ಮಂಜು ಮೊದಲಾದವರು ಪಾಲ್ಗೊಳ್ಳುವರು.

ಮೊದಲಿಗೆ ನಗರದ ಅಕ್ಷತ ಮೆಲೋಡಿಸ್ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಪದಾಧಿಕಾರಿಗಳಾದ ನಾಗರಾಜು, ಮಹದೇವ್, ವೆಂಕಟೇಶ್, ಅಮರನಾಥ್, ಕಾಶಿನಾಥ್ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: