ಕರ್ನಾಟಕಪ್ರಮುಖ ಸುದ್ದಿ

ಬಳ್ಳಾರಿಯಲ್ಲಿ ಚಿರತೆ ದಾಳಿ : ಎರಡು ಕುದುರೆ ಬಲಿ !

ಬಳ್ಳಾರಿ, ಆ.3 : ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ ಅರಣ್ಯ ಇಲಾಖೆ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಚಿರತೆಯೊಂದು ಕುರಿಗಾಹಿಗಳ ಎರಡು ಕುದುರೆಗಳ ಮೇಲೆ ದಾಳಿ ನಡೆಸಿ, ಕೊಂದು ಹಾಕಿದ ಘಟನೆ ವರದಿಯಾಗಿದೆ.

ಸಂಕೇಶ್ವರದಿಂದ ವಲಸೆ ಬಂದ ಮುರುಳಿ ಎಂಬ ಕುರಿಗಾಹಿಗೆ ಸೇರಿದ ಎರಡು ಕುದುರೆಗಳ ಕಾಲಿಗೆ ಜಂಟಿಯಾಗಿ ಹಗ್ಗ ಕಟ್ಟಲಾಗಿತ್ತು. ಈ ವೇಳೆಯಲ್ಲಿ ಚಿರತೆಯು ಕುದುರೆಗಳ ಮೇಲೆರಗಿದ್ದು, ಕಾಲಿಗೆ ಹಗ್ಗ ಕಟ್ಟಿದ್ದರಿಂದ ಓಡಲು ಸಾಧ್ಯವಾಗದೆ ಚಿರತೆ ದಾಳಿಗೆ ಸುಲಭದ ತುತ್ತಾಗಿ ದಾರುಣವಾಗಿ ಪ್ರಾಣ ಬಿಟ್ಟಿವೆ. ಇತ್ತೀಚೆಗಷ್ಟೆ ಚಿರತೆಯು ಗ್ರಾಮದ ಬಳಿಯಲ್ಲಿರುವ ತೋಟದ ಮನೆಯಲ್ಲಿರುವ ಕುರಿಯನ್ನು ತಿದ್ದುಹಾಕಿದ್ದರಿಂದ ಸಾರ್ವಜನಿಕರು ಭಯಭೀತರಾಗಿದ್ದರು. ಆದರೆ ಕುರಿ ತಿಂದ ಒಂದು ವಾರದ ಅಂತರದಲ್ಲಿ ಕುರಿಗಾಹಿಳಗ ಕುದುರೆಗಳ ಮೇಲೆ ದಾಳಿ ಮಾಡಿರುವುದರಿಂದ ಕಾಡಂಚಿನ ಗ್ರಾಮಸ್ಥರು ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ.

-ಎನ್.ಬಿ.

Leave a Reply

comments

Related Articles

error: