ಮೈಸೂರು

ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಮಹದೇವಪ್ಪ ಅವಿರೋಧ ಆಯ್ಕೆ

ಮೈಸೂರು, ಆ.೩: ಮೈಸೂರು ಜಿಲ್ಲಾ ಯೋಜನಾ ಸಮಿತಿಗೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವಿರೋಧವಾಗಿ ಆಯ್ಕೆಯಾದರು.
ಮೈಸೂರು ಜಿಲ್ಲಾ ಯೋಜನಾ ಸಮಿತಿಯಲ್ಲಿ ಒಟ್ಟು ೮೦ ಸದಸ್ಯರಿದ್ದು, ನಗರ, ಸ್ಥಳೀಯ ಸಂಸ್ಥೆಗಳಿಂದ ೨೭ ಜನ ಸದಸ್ಯರು, ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಿಂದ ೩೭ ಸದಸ್ಯರು ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ೫೮ ಜನ ಸದಸ್ಯರು ಭಾಗವಹಿಸಿದ್ದರು. ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿ ಅಧ್ಯಕ್ಷರು, ಒಂದೊಂದು ತಾಲ್ಲೂಕಿಗೆ ಒಬ್ಬೊಬ್ಬರು ಗ್ರಾ.ಪಂ. ಅಧ್ಯಕ್ಷರು ಸದಸ್ಯರಿರುತ್ತಾರೆ.
ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಇವರಿಗೆ ಸೂಚಕರಾಗಿ ತಲಾಕಾಡು ಜಿ.ಪಂ.ಸದಸ್ಯ ಮಂಜುನಾಥನ್ ಸಹಿ ಹಾಕಿದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸದಸ್ಯರಾದ ಪಧ್ಮನಾಭ್ ವಹಿಸಿದ್ದರು. ಚುನಾವಣಾಧಿಕಾರಿ ಜಿ.ಪಂ, ಸಿಇಒ ಶಿವಶಂಕರ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಕಕ್ಷೆ ನಯಿಮಾ ಸುಲ್ತಾನ, ಸಿಪಿಒ ಪ್ರಭುಸ್ವಾಮಿ, ಮಾಜಿ ಮೇಯರ್‌ಗಳಾದ ಭೈರಪ್ಪ, ಶ್ರೀಕಂಠಯ್ಯ, ಜಿ.ಪಂ ಮಾಜಿ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್, ಜಿ.ಪಂ ಸದಸ್ಯರಾದ ವೆಂಕಟಸ್ವಾಮಿ, ಕೃಷ್ಣ, ಗೌರಮ್ಮ ಸೋಮಶೇಖರ್, ಮಂಗಳ ಸೋಮಶೇಖರ್, ಕೆ.ವೈ.ಭಾಗ್ಯ, ಜಯಮ್ಮ, ತಾ.ಪಂ ಸದಸ್ಯರಾದ ಶ್ರೀಕಂಠತೊಂಡೆಗೌಡ, ಕನ್ನೇಗೌಡ, ನೇತ್ರಾವತಿ ವೆಂಕಟೇಶ್, ದೇವನೂರು ಮಹಾದೇವಮ್ಮ ಹಾಜರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: