ಕರ್ನಾಟಕಪ್ರಮುಖ ಸುದ್ದಿ

ಇಂಧನ ಸಚಿವ ಡಿಕೆಶಿ ಆಪ್ತನ ಮನೆ ಮೇಲೆ ಮುಂದುವರಿದ ಐಟಿ ದಾಳಿ

ರಾಜ್ಯ(ಹಾಸನ)ಆ.4:-ಇಂಧನ ಸಚಿವ  ಡಿ.ಕೆ. ಶಿವಕುಮಾರ್ ಆಪ್ತ ಉದ್ಯಮಿ ಸಚಿನ್ ನಾರಾಯಣ್ ಮನೆ  ಮೇಲೆ ಐಟಿ ಅಧಿಕಾರಿಗಳ ದಾಳಿ ಮುಂದುವರಿದಿದೆ.
ಹಾಸನ ನಗರದ ಬಿಎಂ ರಸ್ತೆಯಲ್ಲಿರುವ  ಚೇತನ್  ನಾರಾಯಣ ಮತ್ತು ಮತ್ತು ಸಚಿನ್ ನಾರಾಯಣ್ ಗೆ ಸೇರಿದ ಮನೆಯಲ್ಲಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಗುರುವಾರ ಚೇತನ್ ನಾರಾಯಣ್ ಪತ್ನಿ ರಕ್ಷಿತಾ ರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಬುಧವಾರ  ಬೆಳಗ್ಗೆಯಿಂದಲೂ ಸದ್ದಿಲ್ಲದೆ ಪರಿಶೀಲನೆ ಮುಂದುವರೆದಿತ್ತು. ಲ್ಯಾಪ್ ಟಾಪ್ ಮತ್ತು ಪ್ರಿಂಟರ್ ಅನ್ನು ಮನೆಯೊಳಗೆ ತೆಗೆದುಕೊಂಡು  ಅಲ್ಲೆ ಮೊಕ್ಕಾಂ ಹೂಡಿದ್ದಾರೆ. ಅಧಿಕಾರಿಗಳು ಮೂರು  ಇನ್ನೋವಾ ವಾಹನದಲ್ಲಿ ಪರಿಶೀಲನೆಗೆ ಬಂದಿಳಿದಿದ್ದು ತಂಡದಲ್ಲಿ  21 ಅಧಿಕಾರಿಗಳಿದ್ದಾರೆ. ಗುರುವಾರ ಬ್ಯಾಂಕ್ ದಾಖಲೆ ಸೇರಿ  ಹಲವು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: