ಕ್ರೀಡೆಪ್ರಮುಖ ಸುದ್ದಿ

ಕುಸ್ತಿ ಚಾಂಪಿಯನ್ ಶಿಪ್: ಮಂಜು ಕುಮಾರಿಗೆ ಕಂಚು ಖಚಿತ

ಪ್ರಮುಖ ಸುದ್ದಿ, ನವದೆಹಲಿ, ಆ.4: ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಂಜು ಕುಮಾರಿ ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ.

ಫಿನ್ ಲ್ಯಾಂಡ್ ನ ತಂಪೆರೆಯಲ್ಲಿ ನಡೆಯುತ್ತಿರುವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಉಕ್ರೇನ್ ನ ಇಲೋನ ಪ್ರೊಕೊಪೆವಿನಿಕ್ ಅವರನ್ನು 2-0 ಅಂತರದಿಂದ ಮಣಿಸುವ ಮೂಲಕ ಕಂಚನ್ನು ಖಚಿತಪಡಿಸಿದ್ದಾರೆ. 59 ಕೆಜಿ ವಿಭಾಗದಲ್ಲಿ ಬಲ್ಗೇರಿಯಾದ ಅಲೆಕ್ಸಾಂಡ್ರಿಯನ್ ನಿಕೊಲಾವೀ ಕಾಶಿನೋವಾ ಅವರ 5-1 ಅಂಕಗಳ ಅಂತರದಿಂದ ಗೆಲವು ಸಾಧಿಸುವ ಮೂಲಕ ಕ್ರೀಡಾಕೂಟದ ಪ್ರಮುಖ ಸುತ್ತಿಗೆ ಪದಾರ್ಪಣೆ ಮಾಡಿದ್ದರು. ಈ ಮಧ್ಯೆ 44 ಕೆಜಿ ವಿಭಾಗದಲ್ಲಿ ದಿವ್ಯಾ ತೋಮರ್, 51 ಕೆಜಿ ವಿಭಾಗದಲ್ಲಿ ನಂದಿನಿ ಸಲೋಖೆ ಹಾಗೂ 67 ಕೆಜಿ ವಿಭಾಗದಲ್ಲಿ ಪೂಜಾ ದೇವಿ ಅವರು ಪದಕ ಸುತ್ತಿಗೆ ಅರ್ಹತೆಯ ಪಡೆಯುವಲ್ಲಿ ವಿಫಲವಾಗಿದ್ದಾರೆ. ಆದರೆ ಮಂಜು ಕುಮಾರಿ ಭಾರತಕ್ಕೆ ಪದಕವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: