ಕರ್ನಾಟಕಪ್ರಮುಖ ಸುದ್ದಿ

ಹಾರಂಗಿ ಜಲಾಶಯಕ್ಕೆ ಬಾಗೀನ ಅರ್ಪಣೆ

ರಾಜ್ಯ(ಮಡಿಕೇರಿ)ಆ.4:- ಹಾರಂಗಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಹಾರಂಗಿ ಜಲಾಶಯಕ್ಕೆ ಬಾಗೀನ ಅರ್ಪಿಸಲಾಗಿದೆ.
ಕೊಡಗು ಶಾಸಕ ಅಪ್ಪಚ್ಚು ರಂಜನ್  ಸೋಮವಾರಪೇಟೆಯಲ್ಲಿರುವ ಜಲಾಶಯಕ್ಕೆ ಬಾಗೀನ ಅರ್ಪಿಸಿದ್ದಾರೆ. ಶಾಸಕಕರೊಂದಿಗೆ ಬಿಜೆಪಿ ಸದಸ್ಯರು ಪಾಲ್ಗೊಂಡು ಪೂಜೆ ಸಲ್ಲಿಸಿದರು. ಜಲಾಶಯದ ಬಳಿ ಪೂಜೆ ನಡೆಸಿ ಬಳಿಕ ಬಾಗೀನ ಅರ್ಪಿಸಿದರು. ಜಲಾಶಯದ ಗರಿಷ್ಠ ಮಟ್ಟ 2859 ಅಡಿ, ಇಂದಿನ ಮಟ್ಟ 2858.28 ಅಡಿ, ಒಳಹರಿವು 4018 ಕ್ಯೂಸೆಕ್,ಹೊರಹರಿವು 3000 ಕ್ಯೂಸೆಕ್ ಇದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: