ಮೈಸೂರು

ಮುಸ್ಲಿಂ ಸಮುದಾಯದವರೋರ್ವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ

ಮೈಸೂರು,ಆ.4:- ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ ಭಾರತ ಮಂದಿರ ಕವಿಯ ಕಲ್ಪನೆ ಚೆನ್ನಾಗಿದೆ. ಕವಿಯ ಕಲ್ಪನೆಯನ್ನು ಸಾಕಾರಗೊಳಿಸ ಹೊರಟಿದೆ ಇಲ್ಲೊಂದು ಜೋಡಿ.

ಮೈಸೂರಿನ ಹೆಗ್ಗಡದೇವನಕೋಟೆ ರಸ್ತೆಯಲ್ಲಿರುವ ಕೋಟೆ ಹುಂಡಿಯಲ್ಲಿನ ಮುಸ್ಲಿಂ ಮನೆಯೊಂದರಲ್ಲಿ ಶ್ರಾವಣ ಮಾಸದ ಎರಡನೇ ಶುಕ್ರವಾರದ ದಿನ ಪತಿ ಪತ್ನಿ ಇಬ್ಬರೂ ಸೇರಿ ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಜಾಕೀರ್ ಹುಸೇನ್ ಹಾಗೂ ಆತನ ಪತ್ನಿ ಮಮತಾ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಊರಿನಲ್ಲಿನ ಮುತ್ತೈದೆಯರನ್ನು ಕರೆದು ಅರಿಶಿನ, ಕುಂಕುಮ ಫಲ ತಾಂಬೂಲಗಳನ್ನು  ನೀಡಿದರು. ಒಟ್ಟಿನಲ್ಲಿ ಮುಸ್ಲಿಂ ಸಮುದಾಯದವರೋರ್ವರ  ಮನೆಯಲ್ಲಿಯೂ ಹಿಂದೂಗಳ ಹಬ್ಬದ ಆಚರಣೆಯಾಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ  ನಾವೆಲ್ಲರೂ ಒಂದೇ ಎಂಬ ಭಾವನೆಯ ಸಂದೇಶ ನೀಡಿರುವುದು ಶ್ಲಾಘನೀಯ. (ಕೆ.ಎಸ್.ಎಸ್.ಎಚ್)

Leave a Reply

comments

Related Articles

error: