ಸುದ್ದಿ ಸಂಕ್ಷಿಪ್ತ

ಆ.7. ಕುರುಕ್ಷೇತ್ರ ಮಹಾತ್ಮೆ -ಯಕ್ಷಗಾನ ಬಯಲಾಟ

ಮೈಸೂರು,ಆ.4 : ಮೈಸೂರಿನ ದಕ್ಷಿಣ ಕನ್ನಡ ಜಿಲ್ಲಾ ಸಂಘ, ಚೆಂಡೆಮೇಳ ಕಲಾ ಸಂಘ, ಪುತ್ತೂರಿನ ಶ್ರೀಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಸಹಯೋಗದಲ್ಲಿ ‘ಕುರುಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟವು ಆ.7ರ ಸಂಜೆ 6ರಿಂದ ದಸರಾ ವಸ್ತುಪ್ರದರ್ಶನದ ಕಾಳಿಂಗರಾವ್ ಸಭಾಂಗಣದಲ್ಲಿ ನಡೆಯುವುದು.

ಮುಖ್ಯ ಅತಿಥಿಯಾಗಿ ಮಹಾಪೌರ ಎಂ.ಜೆ.ರವಿಕುಮಾರ್, ಜ್ಞಾನಸರೋವರ ಇಂಟರ್ ನ್ಯಾಷನಲ್ ವಸತಿ ಶಾಲೆ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ, ವಸ್ತು ಪ್ರದರ್ಶನ ಪ್ರಾದಿಕಾರದ ಅಧ್ಯಕ್ಷ ಬಿ.ಸಿದ್ಧರಾಜು, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಬೆಳ್ಳಿಪ್ಪಾಡಿ ಸತೀಶ್ ರೈ, ಮಹೇಶ್ ಕಾಮತ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮೊದಲಾದವರು ಭಾಗವಹಿಸುವರು. ಉಚಿತ ಪ್ರವೇಶವಿದೆ. (ಕೆ.ಎಂ.ಆರ್)

Leave a Reply

comments

Related Articles

error: