ದೇಶವಿದೇಶ

ಸೀರೆ ಆಯ್ಕೆಗೆ ಸಹಕರಿಸಲು ಕೋರಿದ ಅಮೇರಿಕಾದ ರಾಯಭಾರಿ

ದೇಶ(ನವದೆಹಲಿ)ಆ.4:- ಅಮೇರಿಕಾ ರಾಯಭಾರಿ ಮ್ಯಾರಿಕಿ ಲಾಸ್ ಕಾರ್ಲಸನ್ ಭಾರತದಲ್ಲಿ ಆಗಸ್ಟ್ 15ರ ಸ್ವತಂತ್ರ ದಿನದಂದು ಸೀರೆ ಧರಿಸಬೇಕೆಂದು ಬಯಸಿದ್ದಾರಂತೆ. ಆದರೆ ಅವರಿಗೊಂದು ಸಮಸ್ಯೆ ಕಾಡುತ್ತಿದೆಯಂತೆ.

ಮಾಯಿಕೋಬ್ಲಾಗಿಂಗ್ ವೆಬ್ ಸೈಟ್ ಟ್ವೀಟರ್ ನಲ್ಲಿ  ಅವರು ತನ್ನ ಸಮಸ್ಯೆಯನ್ನು ಜನತೆಯ ಮುಂದಿರಿಸಿದ್ದಾಳಂತೆ ಅದನ್ನು ನೋಡಿದವರು ನಿಜಕ್ಕೂ ಹಾಸ್ಯ ಮಾಡುವುದು ಖಚಿತ. ನಾನು ಭಾರತದ ಸ್ವಾತಂತ್ರ್ಯೋತ್ಸವದ  ದಿನ ಸೀರೆಯನ್ನು ಧರಿಸಲು ಉತ್ಸುಕಳಾಗಿದ್ದೇನೆ ಎಂದಿದ್ದಾರಲ್ಲದೇ ಒಂದು ಫೋಟೋವನ್ನೂ ಕೂಡ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನಾಲ್ಕು ಸೀರೆಯನ್ನು ಧರಿಸಿ ತೆಗೆದ ಫೋಟೋಗಳಿವೆ. ನಾನು ಯಾವ ಸೀರೆ ಧರಿಸಬೇಕೆಂಬುದೇ ನನಗೊಂದು ಕಠಿಣ ಪ್ರಶ್ನೆಯಾಗಿದೆ. ಈ ಆಯ್ಕೆ ನಡೆಸಲು ನೀವು ನನಗೆ ಸಹಾಯ ಮಾಡುವಿರೆಂದು ನನಗೆ ವಿಶ್ವಾಸವಿದೆ  ಎಂದು ಬರೆದಿದ್ದಾರೆ.  ನಾಲ್ಕು ಸೀರೆಯನ್ನೂ ಧರಿಸಿದ ಫೋಟೋ ಪೋಸ್ಟ್ ಮಾಡಿದ್ದು ಜನರೀಗ ಅವರು ಯಾವ ಸೀರೆ ಧರಿಸಬೇಕೆಂಬುದರ ಆಯ್ಕೆಗೆ ಸಹಾಯ ಮಾಡಬೇಕಿದೆ. (ಎಸ್.ಎಚ್)

Leave a Reply

comments

Related Articles

error: