ಮೈಸೂರು

ಅಪರಾಧ ನ್ಯಾಯವ್ಯವಸ್ಥೆ ಬಲಪಡಿಸುವಿಕೆ ಕುರಿತು ಆ.6ರಂದು ವಿಚಾರಗೋಷ್ಠಿ

ಮೈಸೂರು, ಆ.4 : ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ದಕ್ಷಿಣವಲಯದ ಪೊಲೀಸ್ ಇಲಾಖೆ ವತಿಯಿಂದ ಆಗಸ್ಟ್ 6 ರಂದು ಬೆಳಿಗ್ಗೆ 9-30ಕ್ಕೆ ಕೆ.ಪಿ.ಎ. ನೂತನ ಸಭಾಭವನದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುವಿಕೆ ಕುರಿತು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ.

1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಬಸವರಾಜ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಾದ ಕೆ. ರುದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸುವರು. ಪೊಲೀಸ್ ಆಯುಕ್ತರಾದ ಡಾ. ಎ. ಸುಬ್ರಮಣ್ಯೇಶ್ವರರಾವ್, ಮೈಸೂರು ವಲಯ ಕಾನೂನು ಅಧಿಕಾರಿ ಪಿ.ಬಿ. ಧರೆಣ್ಣವರ್ ಹಾಗೂ ಆರಕ್ಷಕ ಅಧೀಕ್ಷಕ ರವಿ ಡಿ. ಚನ್ನಣ್ಣವರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

-ಎನ್.ಬಿ.

Leave a Reply

comments

Related Articles

error: