ಸುದ್ದಿ ಸಂಕ್ಷಿಪ್ತ

ಸುದರ್ಶನ ಕ್ರಿಯಾ ಯೋಗ ತರಬೇತಿ : ಆ.8 ರಿಂದ

ಸೋಮವಾರಪೇಟೆ, ಆ.4: ಯೋಗ ಗುರು ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜೀವನ ಕಲಾ ಘಟಕದ ಆಶ್ರಯದಲ್ಲಿ ಆ. 8 ರಿಂದ 13ರವರೆಗೆ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಸುದರ್ಶನ ಕ್ರಿಯಾ ಯೋಗ ತರಬೇತಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ರಾಗಿಣಿ ತಿಳಿಸಿದ್ದಾರೆ.

ಆ.8ರಿಂದ 13ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಹಾಗೂ ಸಂಜೆ 5.30ರಿಂದ 8 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಸರಳ ಹಾಗೂ ಪರಿಣಾಮಕಾರಿ ಯೋಗಾಸನಗಳು, ಸುದರ್ಶನಕ್ರಿಯಾ ಯೋಗದ ಮೂಲಕ ಒತ್ತಡ ನಿವಾರಣೆ, ಸರಳ ಜ್ಞಾನದ ಮೂಲಕ ಸಂಬಂಧ ಸುಧಾರಣೆ, ಏಕಾಗ್ರತೆ ಸೇರಿದಂತೆ ಇತರ ಯೋಗ ಪ್ರಾಕಾರಗಳ ಬಗ್ಗೆ ತರಬೇತಿ ನೀಡಲಾಗುವದು. ಭಾಗವಹಿಸುವವರು ಮೊ: 9945987717 ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ರಾಗಿಣಿ ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: