ಪ್ರಮುಖ ಸುದ್ದಿ

ಡಿಕೆಶಿಗೆ ಬಿಗಿಯಾಗುತ್ತಿದೆ ಕಾನೂನಿನ ಕುಣಿಕೆ: ಜಾರಿ ನಿರ್ದೇಶನಾಲಯ ಅಖಾಡಕ್ಕೆ

ಪ್ರಮುಖ ಸುದ್ದಿ, ಬೆಂಗಳೂರು, ಆ.4: ಆದಾಯ ತೆರಿಗೆ ಅಧಿಕಾರಿಗಳ ಖೆಡ್ಡಕ್ಕೆ ಸಿಲುಕಿರುವ  ಇಂಧನ ಸಚಿವ ಡಿ.ಕೆ.ಶಿವಕುಮಾರ್‌ಗೆ ದಿನದಿಂದ ದಿನಕ್ಕೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದು, ಇದೀಗ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಲು ಮುಂದಾಗಿದೆ.

ಕಳೆದ  ಮೂರು ದಿನಗಳಿಂದ ಆದಾಯ ತೆರಿಗೆ  ಅಧಿಕಾರಿಗಳು ನಡೆಸುತ್ತಿರುವ ದಾಳಿಯಲ್ಲಿ ಶಿವಕುಮಾರ್ ಅವರ ಸಹೋದರ ಸಂಬಂಧಿಕರ ಮನೆ, ಕಚೇರಿಗಳಲ್ಲಿ ಭಾರೀ ಪ್ರಮಾಣದ ನಗದು, ಆಸ್ತಿ, ಬೇನಾಮಿ ಹೆಸರಿನಲ್ಲಿ ಹಣ ಹೂಡಿಕೆ, ನಕಲಿ ಕಂಪನಿಗಳನ್ನು ಸೃಷ್ಟಿಸಿರುವುದು, ಇಂಧನ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿರುವುದು, ನಿಷೇಧಗೊಂಡಿರುವ ಹಳೆ ನೋಟುಗಳ ಸಂಗ್ರಹಣೆ ಮಾಡಿರುವುದು ಬೆಳಕಿಗೆ ಬಂದಿದೆ.

ಯಾವುದೇ ವ್ಯಕ್ತಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ 30 ಲಕ್ಷಕ್ಕಿಂತ ಹೆಚ್ಚಿನ ಹಣ ಕಂಡು ಬಂದರೆ ಐಟಿ ನಿಯಮದ ಪ್ರಕಾರ ಈ ಪ್ರಕರಣವನ್ನು ಜಾರಿ ನಿದೇರ್ಶನಾಲಯ ವಿಚಾರಣೆ ನಡೆಸುತ್ತಿದೆ. ಈ ಹಿಂದೆ ಆಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈಎಸ್‌ಆರ್ ರಾಜಶೇಖರ ರೆಡ್ಡಿ ಪುತ್ರ ಹಾಗೂ ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗಮೋಹನ್‌ರೆಡ್ಡಿ ಮೇಲೆ ಸಿಬಿಐ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಆಸ್ತಿ, ನಗದು ಹಾಗೂ ಬೇನಾಮಿ ಆಸ್ತಿ ಪತ್ತೆಯಾಗಿತ್ತು.

ಜೊತೆಗೆ ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿ ಮಾಡಿರುವ ನೂತನ ನಿಯಮದಂತೆ ಬೇನಾಮಿ ಆಸ್ತಿ ಹೊಂದಿರುವುದು ದೃಢವಾದರೆ ಅವರ ಮೇಲೆ  7 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. (ವರದಿ ಬಿ.ಎಂ)

Leave a Reply

comments

Related Articles

error: