ಕರ್ನಾಟಕ

ಐಟಿ ರೈಡ್ ಡಿಕೆಶಿ ಮೇಲೆ ಪರಿಣಾಮ ಬೀರಲ್ಲ: ಜಮೀರ್ ಅಹಮದ್ ಖಾನ್

ಬೆಂಗಳೂರು,ಆ.4-ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲಿನ ಐಟಿ ದಾಳಿಗೆ ಡಿಕೆಶಿ ಹೆದರಲ್ಲ. ಡಿಕೆಶಿ 4.8 ಕೋಟಿ ರೂ. ಟ್ಯಾಕ್ಸ್ ಕಟ್ಟುತ್ತಾರೆ. ಕೋಟ್ಯಾಂತರ ರೂ. ವಹಿವಾಟು ಮಾಡುತ್ತಾರೆ. ಈ ಐಟಿ ದಾಳಿ ಡಿಕೆಶಿ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯ ಸಾಮಾನ್ಯ ದಾಳಿ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ನಿಯಮಾವಳಿ ಪ್ರಕಾರ ನಮ್ಮನ್ನ ಒಳಗೆ ಬಿಡುವಂತಿಲ್ಲ. ಅದಕ್ಕೂ ಆಕ್ಷೇಪ ಇಲ್ಲ. ಆದರೆ ದಾಳಿ ನಡೆಸಿದ ಸಂದರ್ಭದ ಬಗ್ಗೆ ನಮ್ಮ ಆಕ್ಷೇಪವಿದೆ. ಗುಜರಾತ್ ಶಾಸಕರು ರಾಜ್ಯ ಕ್ಕೆ ಬಂದಿದ್ದಾರೆ. ಆ ಶಾಸಕರನ್ನ ಹೆದರಿಸಿ ಅಹಮದ್ ಪಟೇಲ್ ಅವರನ್ನ ಸೋಲಿಸಲು ಅಮಿತ್ ಷಾ ಐಟಿಯನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇನ್ನೂ ಡಿಕೆಶಿ ಮನೆ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಂಜಿನ ಮೆರವಣಿಗೆಯಲ್ಲಿ ಬಂದ ಮುವ್ವತ್ತಕ್ಕೂ ಹೆಚ್ಚು ಕಾರ್ಯಕರ್ತರು.  ಬಿಜೆಪಿ ಹಠಾವೋ ದೇಶ್ ಬಚಾವೊ ಎಂದು ಘೋಷಣೆ ಕೂಗುತ್ತಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: