ಪ್ರಮುಖ ಸುದ್ದಿ

ಬೈಕ್‌ನಿಂದ ಬಿದ್ದು ವ್ಯಕ್ತಿ ಸಾವು

ಪ್ರಮುಖ ಸುದ್ದಿ, ಶ್ರೀರಂಗಪಟ್ಟಣ, ಆ.4: ಬೈಕ್ ನಿಯಂತ್ರಣ ತಪ್ಪಿ ಸವಾರ ಕೆಳಗೆ ಬಿದ್ದ ಪರಿಣಾಮ ಮೃತಪಟ್ಟಿರುವ ಘಟನೆ ತಾಲೂಕಿನ ಪಾಂಡವಪುರ – ಕೆ.ಆರ್.ಎಸ್. ರಸ್ತೆಯ ಆಗನಹಳ್ಳಿ ಗ್ರಾಮದ ಬಳಿ ನಡೆದಿದೆ.

ಬೇಬಿ ಗ್ರಾಮದ ರಮೇಶ್ (40) ಮೃತ ಸವಾರ. ರಮೇಶ್ ತಮ್ಮ ಸ್ವಗ್ರಾಮದಿಂದ ಕೆಆರ್‌ಎಸ್ ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)

 

Leave a Reply

comments

Related Articles

error: