ಪ್ರಮುಖ ಸುದ್ದಿಮೈಸೂರು

ರಂಗಪ್ಪ, ನಾಯಕ್ ವಜಾಗೊಳಿಸುವಂತೆ ಗೋ. ಮಧುಸೂದನ್ ಆಗ್ರಹ

ಮೈಸೂರು ವಿವಿಯ ಕುಲಪತಿಯಾದ ಪ್ರೊ. ಕೆ.ಎಸ್. ರಂಗಪ್ಪ ಹಾಗೂ ಕುಲಸಚಿವ ಪ್ರೊ. ಪಿ.ಎಸ್. ನಾಯಕ್ ಹಾಗೂ ಕ.ರಾ.ಮು.ವಿ. ಯ ಇತರೆ ಏಳು ಮಂದಿಯ ಅಧಿಕಾರ ದುರುಪಯೋಗ ಹಾಗೂ ವಂಚನೆ ಪ್ರಕರಣದ ವಿರುದ್ಧ ರಾಜ್ಯಪಾಲರ ಆದೇಶದಂತೆ ಈಗಾಗಲೇ ಇವರುಗಳ ಮೇಲೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಧಿಕಾರ ಸ್ಥಾನದಲ್ಲಿರುವ ಇವರುಗಳಿಂದ ದಾಖಲೆ ಹಾಗೂ ಸಾಕ್ಷಿಗಳು ನಾಶವಾಗಲಿವೆ. ಈ ಕೂಡಲೇ ಇವರುಗಳನ್ನು ವಜಾಗೊಳಿಸಬೇಕೆಂದು ಮಾಜಿ ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿವಿ ಹಾಗೂ ಮೈಸೂರು ವಿವಿಯೂ ಆನ್ ಲೈನ್ ಮತ್ತು ಆನೌಟ್ ರೀಚ್ ಕೋರ್ಸ್ ಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಂಚಿಸಿ ಸಾವಿರಾರು ಕೋಟಿ ಅವ್ಯವಹಾರ ನಡೆಸಿದ್ದು ಇದರಿಂದ ರಾಜ್ಯದ ಘನತೆ ಗೌರವಕ್ಕೆ ಕುಂದುಂಟಾಗಿದ್ದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

comments

Related Articles

error: