ಮೈಸೂರು

ಮಕ್ಕಳ ಎಂಡೋಕ್ರಿನಾಲಜಿ ಕ್ಲಿನಿಕ್

ರೇನ್ ಬೊ ಚಿಲ್ಡ್ರನ್ಸ್ ಹಾಸ್ಪಿಟಲ್ ನ ಖ್ಯಾತ ಪೀಡಿಯಾಟ್ರಿಕ್ ಎಂಡೋಕ್ರಿನೋಲಜಿಸ್ಟ್ ವೈದ್ಯರಾದ ಡಾ. ಎನ್. ಕವಿತಾ ಭಟ್ ಅವರು ಪ್ರತಿ ತಿಂಗಳ 3ನೇ ಗುರುವಾರದಂದು ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ಡಾ. ಸೋಮಶೇಖರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ತಿಂಗಳ 3ನೇ ಗುರುವಾರದಂದು ಬೆ.10 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಇರ್ವಿನ್ ರಸ್ತೆಯಲ್ಲಿರುವ ಭಾರತ್ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಮಕ್ಕಳ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು, ಪ್ರೌಢಾವಸ್ಥೆಯ ಅಸ್ವಸ್ಥತೆ, ಬೊಜ್ಜು, ಮಧುಮೇಹ, ಥೈರಾಯ್ಡ್ ಸಮಸ್ಯೆ, ಹಾರ್ಮೋನುಗಳ ಪರಿಸ್ಥಿತಿಗಳು, ಅಡ್ರೀನಲ್, ಪಿಟ್ಯುಟರಿ ಅಸ್ವಸ್ಥತೆ, ನೀರಿನ ಅಸಮತೋಲನ ತೊಂದರೆ ಇದ್ದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಡಾ. ಎನ್. ಕವಿತಾ ಭಟ್ ಹೇಳಿದರು.

ಹೆಚ್ಚಿನ ಮಾಹಿತಿಗಾಗಿ 9611108634 / 8884436014 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: