ಕ್ರೀಡೆಪ್ರಮುಖ ಸುದ್ದಿ

ಕೆಪಿಎಲ್ ನಿಂದ ಹೊರಗುಳಿದ ಕಿಚ್ಚ ಸುದೀಪ್ ನ `ರಾಕ್ ಸ್ಟಾರ್ಸ್’

ಬೆಂಗಳೂರು,ಆ.5-ಕೆಪಿಎಲ್ ನ ಫೇವರೇಟ್ ತಂಡಗಳಲ್ಲಿ ಒಂದಾಗಿದ್ದ ನಟ ಕಿಚ್ಚ ಸುದೀಪ್ ನೇತೃತ್ವದ `ರಾಕ್ ಸ್ಟಾರ್ಸ್’ ತಂಡ ಈ ಬಾರಿ ಕೆಪಿಎಲ್ 6ನೇ ಆವೃತ್ತಿಯಿಂದ ಹೊರಬಿದ್ದಿದೆ.

ಹೌದು, ಕಳೆದ ಮೂರು ವರ್ಷಗಳಿಂದ ಕೆಪಿಎಲ್ ನಲ್ಲಿ ಆಡಿ ಕ್ರಿಕೆಟ್ ಪ್ರಿಯರನ್ನು ರಂಜಿಸಿದ್ದ ರಾಕ್ ಸ್ಟಾರ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಕಣಕ್ಕಿಳಿಯದೆ ಕ್ರಿಕೆಟ್ ಅಭಿಮಾನಿಗಳನ್ನು ನಿರಾಸೆ ಮಾಡಿದೆ. ಕೆಪಿಎಲ್ ನಲ್ಲಿ ಆಡುವಂತೆ ರಾಕ್ ಸ್ಟಾರ್ಸ್ ತಂಡದೊಂದಿಗೆ ಮೂರು ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಮೂರು ವರ್ಷ ಕೆಪಿಎಲ್ ನಲ್ಲಿ ಕಿಚ್ಚ ಸುದೀಪ್ ತಂಡ ಪಂದ್ಯವನ್ನಾಡಿತ್ತು. ಈಗ ಒಪ್ಪಂದ ಮುಗಿದರುವುದರಿಂದ ರಾಕ್ ಸ್ಟಾರ್ಸ್ ತಂಡ ಕೆಪಿಎಲ್ ನಿಂದ ದೂರ ಉಳಿಯಲಿದೆ.

ಈ ಬಾರಿ ಸುದೀಪ್ ತಂಡವನ್ನು ಆಹ್ವಾನಿಸಿಲ್ಲ. ಹೊಸ ಬಿಡ್ ನೊಂದಿಗೆ ಹೊಸ ತಂಡಗಳನ್ನು ಸಿದ್ಧಪಡಿಸಿದ್ದೇವೆ. ಹೀಗಾಗಿ ಈ ಬಾರಿ 7 ತಂಡಗಳು ಕೆಪಿಎಲ್ ನಲ್ಲಿ ಆಡಲಿವೆ ಎಂದು ಕೆಎಸ್ ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.

ರಾಕ್ ಸ್ಟಾರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳು ಕೆಪಿಎಲ್ ನಿಂದ ಹೊರಗುಳಿದರೆ, ಕಲ್ಯಾಣಿ ಬ್ಲಾಸ್ಟರ್ಸ್ ಎಂಬ ಹೊಸ ತಂಡವು ಕೆಪಿಎಲ್ ಗೆ ಹೊಸದಾಗಿ ಸೇರ್ಪಡೆಯಾಗಿದೆ. ಕಲ್ಯಾಣಿ ಮೋಟಾರ್ಸ್ ಸಂಸ್ಥೆ ಒಡೆತನದ ಕಲ್ಯಾಣಿ ಬ್ಲಾಸ್ಟರ್ಸ್ ತಂಡವು ಈ ಸೀಸನ್ ನಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದೆ.

ಕಲ್ಯಾಣಿ ಬ್ಲಾಸ್ಟರ್ಸ್, ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ನಮ್ಮ ಶಿವಮೊಗ್ಗ ಈ ಬಾರಿ ಕೆಪಿಎಲ್ ನಲ್ಲಿ ಆಡಲಿವೆ. (ವರದಿ-ಎಂ.ಎನ್)

Leave a Reply

comments

Related Articles

error: