ಪ್ರಮುಖ ಸುದ್ದಿ

ಮೊಬೈಲ್ ಕಳ್ಳರ ಬಂಧನ: ೬ ಲಕ್ಷ ರೂ. ಮೌಲ್ಯದ ಮೊಬೈಲ್ ವಶ

ಪ್ರಮುಖ ಸುದ್ದಿ, ಮಂಡ್ಯ, ಆ.೫: ಮದ್ದೂರಿನ ಮಹಾರಾಜ ಮೊಬೈಲ್ ಅಂಗಡಿಗೆ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ಗಳನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿ.ಕಿರಣ್ (೧೯), ಸಚಿನ್ (೧೮) ವಿ.ಶಿವರಂಜನ್ (೧೭) ಬಂಧಿತ ಆರೋಪಿಗಳು. ಬಂಧಿತರಿಂದ ೬ ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ೪೯ ಮೊಬೈಲ್‌ಗಳು ಹಾಗೂ ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಳೆದ ಜುಲೈ ೧೬ರಂದು ಮಹಾರಾಜ ಮೊಬೈಲ್ ಸೆಂಟರ್ ಹಿಂಭಾಗದ ಗೋಡೆಗೆ ಕನ್ನ ಹಾಕಿ ಸುಮಾರು ೧೦ ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ಮೊಬೈಲ್ ಹಾಗೂ ಕಾಶ್ ಬಾಕ್ಸ್‌ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: