ಮನರಂಜನೆ

ಬಹುಭಾಷಾ ನಟಿ ಆಗಲಿದ್ದಾರೆ ರಿಜಿಸ್ಟಾರ್ ಮ್ಯಾರೇಜ್..!

ಬೆಂಗಳೂರು,ಆ.5-ಸಿನಿಮಾ ತಾರೆಯರ ಮದುವೆ ಎಂದಾಕ್ಷಣ ನೆನಪಾಗುವುದು ಅದ್ಧೂರಿತನ. ಎಲ್ಲ ಸಿನಿಮಾ ತಾರೆಯರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆಯಾಗುತ್ತಾರೆ. ಆದರೆ ಈ ನಟಿ ಅದ್ಧೂರಿ ಮದುವೆಯಿಂದ ದೂರ ಉಳಿದಿದ್ದು, ಸರಳವಾಗಿ ರಿಜಿಸ್ಟಾರ್ ಮ್ಯಾರೇಜ್ ಆಗಲಿದ್ದಾರೆ.

ಆ ನಟಿ ಯಾರೆಂದು ಯೋಚಿಸುತ್ತಿದ್ದಾರಾ?. ಅದಕ್ಕೆ ಇಲ್ಲಿದೆ ಉತ್ತರ. ಹೌದು, ಬಹುಭಾಷಾ ನಟಿ ಪ್ರಿಯಾಮಣಿ ಎಲ್ಲ ಸಿನಿಮಾ ತಾರೆಯರಂತೆ ಅದ್ಧೂರಿ ಮದುವೆಯಾಗಲು ನಿರಾಕರಿಸಿ ಸರಳವಾಗಿ ರಿಜಿಸ್ಟಾರ್ ಮದುವೆಯಾಗುತ್ತಿದ್ದಾರೆ.

ಆ.23 ರಂದು ಮುಸ್ತಫಾ ರಾಜ್ ಅವರೊಂದಿಗೆ ಪ್ರಿಯಾಮಣಿ ರಿಜಿಸ್ಟಾರ್ ಮ್ಯಾರೇಜ್ ಆಗುತ್ತಿದ್ದಾರೆ. ಆ.24 ರಂದು  ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದಾರೆ. ಪ್ರಿಯಾಮಣಿ ತಮ್ಮ ಗೆಳೆಯ ಮುಸ್ತಾಫ್ ಅವರೊಂದಿಗೆ 2016ರ ಮೇ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮೂಲತಃ ಮುಂಬೈನವರಾಗಿರುವ ಮುಸ್ತಫಾ ರಾಜ್ ದೊಡ್ಡ ಉದ್ಯಮಿ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿ.ಸಿ.ಎಲ್) ಹಿಂದಿನ ಪ್ರಮುಖ ವ್ಯಕ್ತಿ. (ವರದಿ-ಎಂ.ಎನ್)

 

 

Leave a Reply

comments

Related Articles

error: