ಕರ್ನಾಟಕಪ್ರಮುಖ ಸುದ್ದಿ

ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ರಾಜ್ಯ(ಮಡಿಕೇರಿ)ಆ.6:-ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವುನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಜೋಸ್ (೬೦) ಎಂದು ಗುರುತಿಸಲಾಗಿದೆ.  ಬೆಳಗಿನ ಜಾವ ಮನೆಯ ಟೆರೇಸ್ ಮೇಲೆ ನಿಂತು ಕಬ್ಬಿಣದ ಕಂಬಿಯಿಂದ ತೆಂಗಿನಕಾಯಿ  ಕೀಳುತ್ತಿದ್ದಾಗ ವಿದ್ಯುತ್ ತಂತಿ ಕಬ್ಬಿಣದ ಕಂಬಿಗೆ ತಗಲಿದ ಪರಿಣಾಮ ಜೋಸ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ  ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಏಸ್,ಎಸ್.ಎಚ್)

Leave a Reply

comments

Related Articles

error: