
Uncategorized
ಸ್ವಚ್ಛ ಭಾರತ್ ಆಂದೋಲನ
ರಾಜ್ಯ (ಮಡಿಕೇರಿ)ಆ.6:- ಸೋಮವಾರಪೇಟೆ ನೆಹರು ಯುವ ಕೇಂದ್ರ ಮಡಿಕೇರಿ, ತಾಲೂಕು ಯುವ ಒಕ್ಕೂಟ ಹಾಗೂ ಉದಯ ಯುವಕ ಸಂಘ ಯಡೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಯಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಚ್ಛ ಭಾರತ್ ಆಂದೋಲನ ಕಾರ್ಯಕ್ರಮ ನಡೆಯಿತು.
ಶಾಲಾ ಆವರಣ, ಸಾರ್ವಜನಿಕ ರಸ್ತೆ, ಕುಡಿಯುವ ನೀರಿನ ಬಾವಿ ಸುತ್ತ ಮುತ್ತಾ ಸ್ವಚ್ಛತೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯ ಯುವಕ ಸಂಘದ ಅಧ್ಯಕ್ಷರಾದ ಕುಮಾರಸ್ವಾಮಿ ವಹಿಸಿದ್ದರು. ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಎ.ಎಚ್.ರವಿ, ಎಸ್ಡಿಎಂಸಿ ಅಧ್ಯಕ್ಷ ಐ.ಪಿ. ಲೋಕೇಶ್, ಶಾಲಾ ಮುಖ್ಯ ಶಿಕ್ಷಕಿ ಎಲ್.ಎಂ. ಪ್ರೇಮ, ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಕೆ.ಪಿ. ಭಾನುಪ್ರಕಾಶ್, ಸಂಘದ ಸರ್ವ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)