ಮೈಸೂರು

ಅಸಂಬದ್ಧ ನಡಾವಳಿಗೆ ವಿರೋಧ : ಪ್ರತಿಭಟನೆ

ಮೈಸೂರು,ಆ.7:- ನೀತಿ ನಿಯಮಗಳನ್ನು ಗಾಳಿಗೆ ತೂರಿ ಅಸಂಬದ್ಧವಾಗಿ ನಡಾವಳಿಯನ್ನು ನಡೆಸುತ್ತಿರುವ ಕ್ರಮದ ವಿರುದ್ಧ ಕರ್ನಾಟಕ ಅಂಧರ ಸಂಘ ಪ್ರತಿಭಟನೆ ನಡೆಸಿತು.

ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕ ಅಂಧರ ಸಂಘ ಇವರ ಬೇಡಿಕೆಗಳ ಬಗ್ಗೆ ನಡೆದ ಸಭೆಯಲ್ಲಿ ಅತ್ಯಂತ ಹಗುರ ಹಾಗೂ ಸ್ವೇಚ್ಛಾಚಾರದ ಏಕಪಕ್ಷೀಯ ನಡವಳಿಗೆ ಆಕ್ಷೇಪಣೆಯಿದೆ. ಇದು ಯಾವುದೇ ಮಾನದಂಡವಿಲ್ಲದ ನಡಾವಳಿಯಾಗಿದ್ದು, ಪೂರ್ವಾಗ್ರಹ ಪೀಡಿತವಾಗಿದೆ. ಈಗಾಗಲೇ ಹೊರಡಿಸಿರುವ ನಡಾವಳಿಯನ್ನು ರದ್ದುಪಡಿಸಿ ಮರುನಡಾವಳಿಯನ್ನು ಕೈಗೊಂಡು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಲೋಕೇಶ್, ಅಧ್ಯಕ್ಷ ಅಬ್ದುಲ್ ಗಫಾರ್, ಪ್ರಧಾನ ಕಾರ್ಯದರ್ಶಿ ಕೆ.ಮಹೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: