ಕರ್ನಾಟಕ

ನಲ್ಲಿಗಳಲ್ಲಿ ನೀರು ಬರದ ಕಾರಣ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ರಾಜ್ಯ(ತುಮಕೂರು)ಆ.7:-  ಬೇಸಿಗೆ ಪ್ರಾರಂಭವಾದಾಗಿನಿಂದ ಮನೆಯ ನಲ್ಲಿಗಳಲ್ಲಿ ನೀರು ಹರಿಯದ ಕಾರಣ ರೊಚ್ಚಿಗೆದ್ದ ಮಹಿಳೆಯರು ಪುರಸಭೆ ಕಚೇರಿಗೆ ಖಾಲಿ ಕೊಡಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮಧುಗಿರಿ ಪಟ್ಟಣದ 23ನೇ ವಾರ್ಡ್‌ನ ಎಸ್.ಎಂ. ಕೃಷ್ಣ ಹಾಗೂ ಸ್ಲಂ ಬೋರ್ಡ್ ಬಡಾವಣೆಯ ಮಹಿಳೆಯರು ಪುರಸಭೆ ಮುಂಭಾಗ ಜಮಾಯಿಸಿ ನೀರು ಬಿಡದ ಪುರಸಭೆ ಹಾಗೂ ವಾಟರ್‍ಮೆನ್ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು, ಕಳೆದ ಯುಗಾದಿ ಹಬ್ಬದಲ್ಲಿ ಪೈಪ್‍ಲೈನ್ ಮೂಲಕ ಮನೆಯ ನಲ್ಲಿಯಲ್ಲಿ ನೀರು ಕಂಡಿದ್ದು ಬಿಟ್ಟರೆ, ದಿನಕ್ಕೆ ಎರಡು ಟ್ಯಾಂಕರ್‍ನಲ್ಲಿ ನೀರು ಬಿಡುತ್ತಾರೆ. ಪಟ್ಟಣದ ದೊಡ್ಡ ಹಾಗೂ ತೀರಾ ಹಿಂದುಳಿದ ವಾರ್ಡ್ ಇದಾಗಿದ್ದು, ಎರಡು ಟ್ಯಾಂಕರ್ ನೀರು ಸಾಲದೆ ದಿನನಿತ್ಯ ಗಲಾಟೆಗಳು ನಡೆಯುತ್ತವೆ. ಇದರಿಂದ ನೆಮ್ಮದಿ ಇಲ್ಲದಂತಾಗಿದೆ. ಸ್ಥಳಕ್ಕೆ ಬಂದು ಪರಿಶೀಲಿಸಿದರೆ ಸತ್ಯ ನಿಮಗೆ ತಿಳಿಯಲಿದೆ ಎಂದು ಮುಖ್ಯಾಧಿಕಾರಿಗಳನ್ನು  ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: