ಮೈಸೂರು

ಮೈಸೂರಲ್ಲೂ ಪೆಟ್ರೋಲಿಯಂ ಮುಷ್ಕರ: ಒಕ್ಕೂಟದ ಅಧ್ಯಕ್ಷೆ ಶಶಿಕಲಾ ನಾಗರಾಜ್

ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಒಕ್ಕೂಟ ಮತ್ತು ಅಖಿಲ ಕರ್ನಾಟಕ ಪೆಟ್ರೋಲಿಯಂ ವಿತರಕರ ಒಕ್ಕೂಟ ಹಮ್ಮಿಕೊಂಡಿರುವ ಮುಷ್ಕರದಲ್ಲಿ ಮೈಸೂರು ಪೆಟ್ರೋಲಿಯಂ ಒಕ್ಕೂಟ ಭಾಗಿಯಾಗುತ್ತಿದೆ ಎಂದು ಅಧ್ಯಕ್ಷೆ ಶಶಿಕಲಾ ನಾಗರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭಾರತೀಯ ತೈಲ ವಿತರಕ ಕಂಪನಿಗಳ ಡೀಲರ್ ಗಳು ಬಹಳ ವರ್ಷಗಳ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ಈ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

ಅ. 19 ಮತ್ತು 26 ರಂದು ಸಂಜೆ 7 ರಿಂದ 7.15 ರ ವರೆಗೆ ಪೆಟ್ರೋಲ್ ಬಂಕಿನ ಮತ್ತು ಪೆಟ್ರೋಲಿಯಂ ಕಂಪನಿಗಳ ಲಾಂಛನದ ದೀಪ ನಂದಿಸಿ ವ್ಯಾಪಾರವನ್ನು ಸ್ಥಗಿತಗೊಳಿಸಲಾಗುತ್ತದೆ. ನವೆಂಬರ್ 3 ಮತ್ತು 4 ರಂದು ದೇಶಾದ್ಯಂತ ಯಾವುದೇ ಪೆಟ್ರೋಲಿಯಂ ಉತ್ಪನ್ನ ಖರೀದಿ ಮಾಡದಿರುವುದು. ನ. 5 ರ ನಂತರ ಬೆ. 9 ರಿಂದ ಸಂಜೆ 6 ರವರೆಗೆ ಒಂದೇ ಪಾಳಿಯ ವ್ಯಾಪಾರ ಮಾಡುವುದು. ಪ್ರತಿತಿಂಗಳ 2 ಮತ್ತು 4 ನೇ ಶನಿವಾರ ಹಾಗೂ ಎಲ್ಲಾ ಭಾನುವಾರಗಳಂದು ರಜೆ ನೀಡುವುದು, ಯಾವುದೇ ಯಾಂತ್ರಿಕ ತೈಲವನ್ನು ಖರೀದಿಸದಿರುವುದು – ಈ ರೀತಿಯಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಎಸ್. ಆರ್. ಪಾಟೀಲ್ ಹೇಳಿದರು.

ಬೇಡಿಕೆಗಳು:

ಸರ್ಕಾರವೇ ನೇಮಿಸಿದ ಅಪೂರ್ವಚಂದ್ರ ಕಮಿಟಿಯ ವರದಿಗೆ ತೈಲ ವಿತರಕ ಕಂಪನಿಗಳು ಸಹಮತ ನೀಡಿದ್ದು ಈ ವರದಿಯನ್ನು ಅನುಷ್ಠಾನಗೊಳಿಸುವ ಕುರಿತು, ವೈಜ್ಞಾನಿಕವಾಗಿ ಪೆಟ್ರೋಲ್ ನೊಂದಿಗೆ ಎಥೆನಾಲ್ ಮಿಶ‍್ರಣಗೊಳಿಸುವಿಕೆ, ಡೀಲರ್ ಗಳ ಲಾಭಾಂಶ ಹೆಚ್ಚಳ, ಒತ್ತಾಯಪೂರ್ವಕವಾಗಿ ತೈಲೋತ್ಪನ್ನ ಹೇರಿಕೆಗೆ ವಿರೋಧ, ಪೆಟ್ರೋಲಿಯಂ ಉತ್ಪನ್ನಗಳ ಸಾರಿಗೆ ದರ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಸಾರಿಗೆಯಲ್ಲಿರುವ ಲೋಪದೋಷಗಳ ಸರಿಪಡಿಸುವಿಕೆ — ಈ ಬೇಡಿಕೆಗಳ ಈಡೇರಿಕೆಗಾಗಿ ದೇಶವ್ಯಾಪಿ ಮುಷ್ಕರ ಕೈಗೊಂಡಿದ್ದೇವೆ. ಇದರಿಂದ ಸಾರ್ವಜನಿಕರಿಗಾಗುವ ಅನಾನುಕೂಲಕ್ಕೆ ವಿಷಾದಿಸುತ್ತೇವೆ ಎಂದು ಎಸ್.ಆರ್. ನಾಯಕ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೋವಿಂದರಾಜು, ಕಾರ್ಯದರ್ಶಿ ಎಸ್. ಮಂಜೇಶ್ ಕುಮಾರ್ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: