ಮೈಸೂರು

ವ್ಯಂಗ್ಯ ಚಿತ್ರಕಾರ ನಾಗೇಂದ್ರಬಾಬು, ಕಡಲೆಕಾಯಿ ವ್ಯಾಪಾರಿ ವೆಂಕಟೇಶ್‍ಗೆ ಸನ್ಮಾನ

ಕೆ.ಎಂ. ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅ. 20 ರಂದು ಪತ್ರಕರ್ತರ ಭವನದಲ್ಲಿ ಸಾಧಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಖ್ಯಾತ ವ್ಯಂಗ್ಯ ಚಿತ್ರಕಾರ ಎಂ.ವಿ. ನಾಗೇಂದ್ರಬಾಬು ಹಾಗೂ ಕಡಲೆಕಾಯಿ ವ್ಯಾಪಾರಿ ವೆಂಕಟೇಶ್ ಅವರಿಗೆ ಸನ್ಮಾನ ಮಾಡಿದರು.

ಎಂ.ವಿ. ನಾಗೇಂದ್ರ ಬಾಬು ಇದುವರೆಗೂ 8 ಸಾವಿರ ವ್ಯಂಗ್ಯ ಚಿತ್ರಗಳನ್ನು ಬಿಡಿಸಿದ್ದಾರೆ. ವೆಂಕಟೇಶ್ ಅವರು ಕಡಲೆಕಾಯಿ ವ್ಯಾಪಾರಿಯಾಗಿದ್ದರೂ ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಭಾಷೆಯ ಜನರಿಗೆ ಕಡಲೆಕಾಯಿ ಕೊಟ್ಟು, ಸಾಮಾಜಿಕ ಕಳಕಳಿಯಿಂದ ಕಾವೇರಿ ನೀರಿನ ಹೋರಾಟದ ವಿಷಯವನ್ನು ದಿನಕ್ಕೆ 2 ರಿಂದ 3 ಸಾವಿರ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸುತ್ತಿದ್ದಾರೆ ಎಂದು ಅಧ್ಯಕ್ಷ ಜಿ.ಟಿ. ಪ್ರಕಾ‍ಶ್ ಹೇಳಿದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶ‍್ರೀಧರ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ, ರಾಮಪ್ರಸಾದ್, ಕಶ‍್ಯಪ್, ಅಜಯ್ ಶಾಸ್ತ್ರಿ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: