ಕರ್ನಾಟಕ

ಸುರೇಂದ್ರ ಕೌಲಗಿ ನಿಧನಕ್ಕೆ ಸಂತಾಪ

ಮಂಡ್ಯ, ಆಗಸ್ಟ್ 7 : ಹಿರಿಯ ಗಾಂಧಿವಾದಿ ಸುರೇಂದ್ರ ಕೌಲಗಿ ಅವರ ನಿಧನಕ್ಕೆ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಸುರೇಂದ್ರ ಕೌಲಗಿ ಅವರು ಮೇಲುಕೋಟೆಯಲ್ಲಿ ನೆಲೆ ನಿಂತು ಶೋಷಿತ ಹೆಣ್ಣುಮಕ್ಕಳಿಗೆ ಪುನರ್ವಸತಿ, ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೈಮಗ್ಗ ಮತ್ತು ತೋಟಗಾರಿಕೆ ಮುಂತಾದ ಕೌಶಲಗಳನ್ನು ತಮ್ಮ ಜನಪದ ಸೇವಾ ಟ್ರಸ್ಟ್ ಮೂಲಕ ಕಲಿಸಿಕೊಟ್ಟಿದ್ದಾರೆ.

ಸುರೇಂದ್ರ ಕೌಲಗಿ ಅವರು ಜನಪದ ಸೇವಾ ಟ್ರಸ್ಟ್ ಆರಂಭಿಸಿ ಅಂಗವಿಕಲರು, ಅಶಕ್ತರ ಸೇವೆ ಖಾದಿ ಪ್ರಚಾರ, ಸಾವಯವ ಕೃಷಿ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಸುರೇಂದ್ರ ಕೌಲಗಿ ಅವರ ನಿಧನದಿಂದ ದುಃಖಿತರಾದ ಕುಟುಂಬಸ್ತರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲೆಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: