
ಕರ್ನಾಟಕಪ್ರಮುಖ ಸುದ್ದಿ
ಕೆ.ಆರ್.ಎಸ್. ಹೊರ ಹರಿವಿನಲ್ಲಿ ಭಾರೀ ಹೆಚ್ಚಳ
ರಾಜ್ಯ(ಮಂಡ್ಯ)ಆ.8:-ಕೆ.ಆರ್.ಎಸ್. ಹೊರ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ. ಮತ್ತೆ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಬಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.
ಕೆ.ಆರ್.ಎಸ್.ಜಲಾಶಯದಿಂದ ಆರು ಸಾವಿರ ಕ್ಯೂಸೆಕ್ ನೀರು ಹೊರಕ್ಕೆ, ಜಲಾಶಯದ ಹೊರ ಹರಿವಿನ ಪ್ರಮಾಣ ನಾಲ್ಕು ಸಾವಿರದಿಂದ ಆರು ಸಾವಿರಕ್ಕೇರಿದೆ. ಜಿಲ್ಲೆಯ ನಾಲೆಗಳಿಗೆ ನೀರು ಬಿಡುವಂತೆ ರೈತರು ಮೊರೆ ಇಡುತ್ತಿದ್ದರು. ರಾಜ್ಯ ಸರ್ಕಾರ ತಮಿಳುನಾಡಿಗೆ ಹೆಚ್ಚಿನ ನೀರು ಬಿಟದಟಿದೆ ಎನ್ನಲಾಗುತ್ತಿದೆ. ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮಕ್ಕೆ ರೈತರ ಆಕ್ರೋಶ ವ್ಯಕ್ತವಾಗಿದೆ. (ಕೆ.ಎಸ್,ಎಸ್.ಎಚ್)