ಮೈಸೂರು

ಹುಟ್ಟಿನಿಂದಲೇ ಮಾನವೀಯತೆ ಅಳವಡಿಸಿಕೊಳ್ಳಿ: ನ್ಯಾ. ಸಂತೋಷ್ ಹೆಗ್ಡೆ

ಮಾನವೀಯತೆ ಗುಣಗಳನ್ನು ಬಾಲ್ಯದಿಂದಲೇ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡರೆ ಸಾಯುವಾಗ ಮಾನವರಾಗಿ ಸಾಯುತ್ತೇವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ. ಎನ್. ಸಂತೋಷ್ ಹೆಗ್ಡೆ ಹೇಳಿದರು.

ಮೈಸೂರಿನ ರಂಗಾಯಣದ ವನರಂಗದಲ್ಲಿ ಅನುಗ್ರಹ ಪ್ರಕಾಶನ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನುಷ್ ಎ. ಶೆಟ್ಟಿ ಅವರ ಜೋಡ್ಪಾಲ ಕಾದಂಬರಿಯನ್ನು ಬಿಡುಗಡೆಗೊಳಿಸಿ ಡಾ. ಎನ್. ಸಂತೋಷ್ ಹೆಗ್ಡೆ ಮಾತನಾಡಿದರು. ಹುಟ್ಟಿದ ನಂತರ ಜೀವನಪಥದಲ್ಲಿ ಮಾನವೀಯತೆ ಎಂಬ ಪದವನ್ನು ಅಳವಡಿಸಿಕೊಂಡು ಮಾನವರಾಗಿ ಸಾಯಬೇಕು. ಇದಕ್ಕೆ ಮೇಲ್ಪಟ್ಟ ಗೌರವ ಬೇರಾವುದೂ ಇಲ್ಲ ಎಂದರು.

ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್ ಮಾತನಾಡಿ ಅನುಷ್ ಅವರ ಕೃತಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಮಹತ್ವಾಕಾಂಕ್ಷಿ, ಉತ್ತಮ ಲೇಖಕಿಯಾಗಿ ಹೊರಹೊಮ್ಮುವ ಅಭಿಲಾಷೆಯನ್ನಿಟ್ಟುಕೊಳ್ಳದೇ ಕೂತೂಹಲದಿಂದ ಕೃತಿ ರಚಿಸಿದ್ದು, ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತದೆ ಎಂದು ತಿಳಿಸಿದರು.

ಕೃತಿಯ ಕರ್ತೃ ಅನುಷ್ ಶೆಟ್ಟಿ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕಥೆಗಾರ ಅಬ್ದುಲ್ ರಷೀದ್, ಗಳಗನಾಥ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: