ಕ್ರೀಡೆ

2019 ರ ವಿಶ್ವಕಪ್ ನನ್ನ ಕನಸು: ಶ್ರೀಶಾಂತ್

ಹೊಸದಿಲ್ಲಿ,ಆ.8-ಕ್ರಿಕೆಟರ್ ಎಸ್.ಶ್ರೀಶಾಂತ್ ಮೇಲೆ ಬಿಸಿಸಿಐ ವಿಧಿಸಿದ್ದ ಅಜೀವ ನಿಷೇಧವನ್ನು ಹಿಂಪಡೆಯುವಂತೆ ಕೇರಳ ಹೈ ಕೋರ್ಟ್ ನಿನ್ನೆಯಷ್ಟೆ ಆದೇಶ ಹೊರಡಿಸಿದೆ. ನಿಷೇಧದಿಂದ ಮುಕ್ತರಾಗಿರುವ ಬೌಲರ್ ಶ್ರೀಶಾಂತ್ ಕನಸು ಇದೀಗ 2019 ವಿಶ್ವಕಪ್ ಕ್ರಿಕೆಟ್ ಮೇಲಿದೆ.

ಈ ಬಗ್ಗೆ ಮಾತನಾಡಿರುವ ಶ್ರೀಶಾಂತ್, 2019ರ ಭಾರತೀಯ ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದೇ ಈಗ ನನ್ನ ಕ್ರಿಕೆಟ್ ಬದುಕಿನ ಮಹಾದಾಸೆ. ನನಗೆ ಗೊತ್ತು ಇದು ಬಹುತೇಕ ಅಸಾಧ್ಯವಾದ ಮಾತು; ಹಾಗಿದ್ದರೂ ಒಂದು ವೇಳೆ ನಾನು 2019ರ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಆಡಿದೆನೆಂದಾದರೆ ಅದು ನಿಜಕ್ಕೂ ಒಂದು ಪವಾಡವೇ ಸರಿ. ಅಂತಹ ಒಂದು ಪವಾಡ ಸಂಭವಿಸೀತು ಎಂಬ ನಂಬಿಕೆ ನನ್ನಲ್ಲಿದೆ. ನನಗೀಗ 34 ವರ್ಷ. ಮಿಸ್ಬಾ ಉಲ್ ಹಕ್, ಯೂನಿಸ್ ಖಾನ್, ಸಚಿನ್ ಪಾಜಿ ಇವರೆಲ್ಲ 40ರ ಹತ್ತಿರದ ತನಕವೂ ಕ್ರಿಕೆಟ್ ಆಡಿದ್ದಾರೆ. ಅವರೇ ನನಗೆ ಪ್ರೇರಣೆ ಎಂದಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದಲ್ಲೀಗ ಅತ್ಯಂತ ಕಿರಿಯ ವಯಸ್ಸಿನ ಬೌಲರ್ ಗಳಿದ್ದಾರೆ. ಅಂದರೆ ಬೌಲರ್ ಗಳ ಸ್ಥಾನಕ್ಕೆ ತೀವ್ರವಾದ ಸ್ಪರ್ಧೆ ಇದೆ ನಿಜ. ಆದರೆ ನಾನು ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾಗಲೂ ಇದೇ ರೀತಿಯ ಸ್ಪರ್ಧೆ ಇತ್ತು. ಸ್ಪರ್ಧೆ ಇದ್ದಾಗಲೇ ನಿಮ್ಮಿಂದ ಅತ್ಯುತ್ತಮ ಪ್ರದರ್ಶನ ಹೊರಬರುತ್ತದೆ ಎಂಬದು ನನ್ನ ಅನ್ನಿಸಿಕೆ. ನನ್ನ ಪುನಾರಾಗಮನ ಸಾಧ್ಯವಾದಲ್ಲಿ ನಾನು ನನ್ನ ಪ್ರತಿಭೆಗೆ ನ್ಯಾಯ ಒದಗಿಸುತ್ತೇನೆಂಬ ನಂಬಿಕೆ ನನ್ನಲ್ಲಿದೆ. (ವರದಿ-ಎಂ.ಎನ್)

Leave a Reply

comments

Related Articles

error: