ಮೈಸೂರು

ದೈವಮೂಲ, ನಿಧಿಮೂಲ, ವಾರದಮೂಲವನ್ನು ಭೂಲೋಕಕ್ಕೆ ಪರಿಚಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯ

ಮೈಸೂರು,ಆ.8:- ಕಾಯಕಯೋಗಿ ನಾಗರಾಜ ಸ್ವಾಮೀಜಿಯವರು ಮನುಕುಲಕ್ಕೆ ಉಪಯೋಗವಾಗುವ ವಿಶ್ವಪರಿವರ್ಣ ನ್ಯಾಯದ ತಕ್ಕಡಿ ಎಂಬ ಮಹಾಗ್ರಂಥವನ್ನು ಬರೆದಿದ್ದು  ಜಿಲ್ಲಾಡಳಿತ ಅದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನ ಸೆಳೆಯುವಲ್ಲಿ ಪ್ರಯತ್ನಿಸಬೇಕು ಎಂದು ಒತ್ತಾಯಿಸಿ ಶ್ರೀಆಲದ ಮರದ ಬ್ರಹ್ಮವಿಜ್ಞಾನಿ ಆಶ್ರಮದ ವತಿಯಿಂದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಧಿಕಾರಿ ಕಚೇರಿ ಎದುರು ಈ ಕುರಿತು ಧರಣಿ ನಡೆಸಿದ ಆಶ್ರಮದ ಹಿತೈಷಿಗಳು ಮಾತನಾಡಿ ಶ್ರೀಗಳು ಬರೆದಿರುವ ಗ್ರಂಥದಲ್ಲಿ ಸವಿಸ್ತಾರವಾದ ವಿವರಣೆಯಿದ್ದು, ದೈವಮೂಲ, ನಿಧಿಮೂಲ, ವಾರದಮೂಲವನ್ನು ಸರ್ಕಾರ ಇಡೀ ಭೂಲೋಕಕ್ಕೆ ಪರಿಚಯಿಸುವ ಯತ್ನ ಮಾಡಬೇಕು. ದೈವಮೂಲದಲ್ಲಿ ಭೂಲೋಕಕ್ಕೆ ಪರಂಜ್ಯೋತಿ ಸ್ವರೂಪನಾದ ಪರಮಾತ್ಮನ ದಿವ್ಯ ದರ್ಶನವನ್ನು ಕೊಡಿಸುವುದಾಗಿ ಸ್ವಾಮೀಜಿಯವರು ಈಗಾಗಲೇ ಬರೆದಿರುವ ಕಾಲಜ್ಞಾನದಲ್ಲಿ ತಿಳಿಸಿದ್ದು, ಈ ಕುರಿತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನ ಸೆಳೆದು ದೈವ ಮೂಲ, ನಿಧಿಮೂಲ ಹಾಗೂ ವಾರದ ಮೂಲಗಳನ್ನು ಭೂಲೋಕಕ್ಕೆ ಪರಿಚಯಿಸುವುದಕ್ಕೆ ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಅಧ್ಯಕ್ಷ ಎ.ಎಂ.ರಂಗಸ್ವಾಮಿ, ಕಾರ್ಯದರ್ಶಿ ಹೆಚ್.ನಾಗರಾಜು, ಬಸಪ್ಪ, ಮಂಜು, ಅಂಬುಜಿ ಮಂಡ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: