ಪ್ರಮುಖ ಸುದ್ದಿ

ಭೀಮಾ ತೀರದ ಹಂತಕ ಖ್ಯಾತಿಯ ಬಾಗಪ್ಪ ಹರಿಜನನ ಮೇಲೆ ಗುಂಡಿನ ದಾಳಿ

ಪ್ರಮುಖ ಸುದ್ದಿ, ವಿಜಯಪುರ, ಆ.೮: ಭೀಮಾ ತೀರದ ಹಂತಕ ಖ್ಯಾತಿಯ ಬಾಗಪ್ಪ ಹರಿಜನನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ವಿಜಯಪುರ ಕೋರ್ಟ್ ಆವರಣದಲ್ಲಿ ಮಂಗಳವಾರ ನಡೆದಿದ್ದು, ಭಾಗಪ್ಪನ ಸ್ಥಿತಿ ಚಿಂತಾನಕವಾಗಿದೆ.
ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಭಾಗಪ್ಪ ಮಂಗಳವಾರ ವಿಚಾರಣೆಗೆಂದು ವಿಜಯಪುರ ಕೋರ್ಟ್‌ಗೆ ಬಂದಿದ್ದ. ಈ ವೇಳೆ ಬಾಗಪ್ಪ ಹರಿಜನ ಇನ್ನೇನು ಕೋರ್ಟ್ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಅಪಚಿತರ ವ್ಯಕ್ತಿಯೊಬ್ಬ ಏಕಾಏಕಿ ಐದು ಸುತ್ತು ಗುಂಡು ಹಾರಿಸಿದ್ದಾನೆ. ಈ ಪೈಕಿ ಐದೂ ಗುಂಡುಗಳು ಬಾಗಪ್ಪ ಹರಿಜನನ ಎದೆ ಭಾಗಕ್ಕೆ ಹೊಕ್ಕಿದ್ದು, ರಕ್ತದಮಡುವಿನಲ್ಲಿ ಬಿದ್ದಿದ್ದ ಬಾಗಪ್ಪ ಹರಿಜನನನ್ನು ಕೂಡಲೇ ಪೊಲೀಸರು ವಿಜಯಪುರದ ಬಿಎಲ್ ಡಿಇ ಆಸ್ಪತ್ರೆಗೆ ದಾಖಲು ಮಾಡಿದರು.
ಬಾಗಪ್ಪ ಹರಿಜನ ಸ್ಥಿತಿ ಚಿಂತಾಜನಕವಾಗಿದ್ದು, ಎದೆ ಭಾಗದಲ್ಲಿ ಮೂರು ಮತ್ತು ಕರುಳು ಹಾಗೂ ಪಿತ್ತಕೋಶದ ಭಾಗದಲ್ಲಿ ಎರಡು ಗುಂಡುಗಳು ಹೊಕ್ಕಿವೆ. ಪ್ರಸ್ತುತ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು, ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಗುಂಡಿನ ದಾಳಿ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: