ಪ್ರಮುಖ ಸುದ್ದಿ

ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣ: ಆ.೧೭ಕ್ಕೆ ತೀರ್ಪು

ಪ್ರಮುಖ ಸುದ್ದಿ, ಶಿವಮೊಗ್ಗ, ಆ.೮: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣದ ತೀರ್ಪನ್ನು ಶಿವಮೊಗ್ಗ ೨ನೇ ಜೆಎಂಎಫ್‌ಸಿ ನ್ಯಾಯಾಲಯ ಆ.೧೭ಕ್ಕೆ ಮುಂದೂಡಿದೆ.
ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದ ಹರತಾಳು ಹಾಲಪ್ಪ ಅವರ ಭವಿಷ್ಯ ಇಂದೇ ನಿರ್ಧಾರವಾಗುತ್ತದೆ ಎಂದು ಭಾವಿಸಲಾಗಿತ್ತು. ಸತತ ಏಳು ವರ್ಷಗಳ ವಿಚಾರಣೆ ಬಳಿಕ ಇಂದು ತೀರ್ಪು ಹೊರಬೀಳುವ ಸಾಧ್ಯತೆಯಿತ್ತು. ಆದರೆ ನ್ಯಾಯಾಲಯ ತೀರ್ಪನ್ನು ಆ.೧೭ಕ್ಕೆ ಕಾಯ್ದಿರಿಸಿದೆ. ೨೦೦೯ರ ನ.೨೬ ರಂದು ಸಂತ್ರಸ್ಥ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಅಂದು ಸಚಿವರಾಗಿದ್ದ ಹಾಲಪ್ಪ ರಾಜೀನಾಮೆ ನೀಡಿದ್ದರು. ಐಪಿಸಿ ಸೆಕ್ಷನ್ ೩೭೬, ೩೪೨, ೫೦೬, ೩೪೧ ಹಾಗೂ ೩೪ ರ ಅಡಿ ಪ್ರಕರಣ ದಾಖಲಾಗಿತ್ತು. (ವರದಿ ಬಿ.ಎಂ)

Leave a Reply

comments

Related Articles

error: