ಮೈಸೂರು

ಮಹನೀಯರ ಹೆಸರಲ್ಲಿ ತಪ್ಪು ಮಾಡುತ್ತಿದ್ದೇವೆ: ಪ್ರೊ. ಕೆ.ಎಸ್. ರಂಗಪ್ಪ ವಿಷಾದ

ಮಹನೀಯರ ಆದರ್ಶ, ಸಾಧನೆಗಳನ್ನು ಯಾರೂ ಪಾಲಿಸುತ್ತಿಲ್ಲ. ಬದಲಿಗೆ ಅವರ ಹೆಸರಲ್ಲಿ ಬಹಳಷ್ಟು ತಪ್ಪುಗಳನ್ನು ಮಾಡುತ್ತಿದ್ದೇವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆದ ವಾಲ್ಮೀಕಿ ಜಯಂತಿ ಮತ್ತು ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಪ್ರೊ. ಕೆ.ಎಸ್. ರಂಗಪ್ಪ ಮಾತನಾಡಿದರು. ಮಹನೀಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯದೇ ಅವರ ಹೆಸರಿಗೆ ಅಪಚಾರ ಎಸಗುತ್ತಿದ್ದೇವೆ. ಪ್ರಜ್ಞಾವಂತರು, ಮಹಾನ್ ಸಾಧಕರನ್ನು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿದ್ದೇವೆ. ಅವರ ಮೌಲ್ಯಗಳನ್ನು ಪಾಲಿಸುತ್ತಿಲ್ಲ. ಇಂಥ ಮಹಾನ್ ವ್ಯಕ್ತಿಗಳ ಸಾಧನೆಗಳು ಪ್ರತಿಯೊಬ್ಬರಿಗೂ ದಾರಿದೀಪ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಡಿ.ಆರ್. ರಾಮಚಂದ್ರಯ್ಯ, ಹಿರಿಯ ಉಪನಿರ್ದೇಶಕಿ ಮಿಲನಾ ಎಸ್. ಮುರುಗೋಡ್, ಅಬಕಾರಿ ಇಲಾಖೆ ಅಧೀಕ್ಷಕಿ ಮಹಾದೇವಿ ಬಾಯಿ, ಮತ್ತಿತರರನ್ನು ಸನ್ಮಾನಿಸಲಾಯಿತು.

ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ರಾಜಣ್ಣ, ಗಾಂಧಿ ಭವನದ ನಿರ್ದೇಶಕ ಪ್ರೊ. ಎಸ್. ರಾಜಪ್ಪ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಕುಮಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: