ಮೈಸೂರು

ವಸ್ತುಪ್ರದರ್ಶನ ಮಳಿಗೆ ಮೇಲೆ ಪಾಲಿಕೆ ಅಧಿಕಾರಿಗಳ ದಾಳಿ: 150 ಕೆ.ಜಿ. ಪ್ಲಾಸ್ಟಿಕ್ ವಶ

ವಸ್ತುಪ್ರದರ್ಶನ ಮಳಿಗೆಗಳ ಮೇಲೆ ದಾಳಿ ನಡೆಸಿರುವ ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳು ಅಲ್ಲಿ ಸಂಗ್ರಹಿಸಲಾದ 150 ಕೆ.ಜಿ. ಪ್ಲಾಸ್ಟಿಕ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಗುರುವಾರ ಸಂಜೆ ಮಹಾನಗರಪಾಲಿಕೆ ಆಯುಕ್ತ ಜೆ. ಜಗದೀಶ್ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ವಸ್ತುಪ್ರದರ್ಶನದಲ್ಲಿರುವ  ಬಟ್ಟೆ ಅಂಗಡಿಗಳು, ಆಹಾರ ಮಳಿಗೆಗಳು, ಚಾಟ್ಸ್ ಸೆಂಟರ್ ಸೇರಿದಂತೆ ಹಲವು ಮಳಿಗೆಗಳಲ್ಲಿ ಸಂಗ್ರಹಿಸಿಡಲಾದ ಪ್ಲಾಸ್ಟಿಕ್ ಗಳನ್ನು ವಶಕ್ಕೆ ಪಡೆದರು.

ಪಾಲಿಕೆ ಆಯುಕ್ತ ಜೆ. ಜಗದೀಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಷಿದ್ಧ ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ ವಸ್ತುಪ್ರದರ್ಶನದಲ್ಲಿ ಪ್ಲಾಸ್ಟಿಕ್ ಬಳಕೆ ನಿರಂತರವಾಗಿ ನಡೆಯುತ್ತಿದೆ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದೇವೆ. ಮಳಿಗೆಯವರು ಮುಂದೆಯೂ ಪ್ಲಾಸ್ಟಿಕ್ ಬಳಸಿದರೆ ದಂಡ ವಿಧಿಸಲಾಗುವುದು ಎಂದರು.

ದಾಳಿಯಲ್ಲಿ ಪಾಲಿಕೆ ಕಂದಾಯ ಆಯುಕ್ತ ಕುಮಾರನಾಯ್ಕ್, ಆರೋಗ್ಯಾಧಿಕಾರಿ ಡಾ. ರಾಮಚಂದ್ರ, ಪಾಲಿಕೆ ಪರಿಸರ ಅಭಿಯಂತರ ನಸೀಮಾ ಅಜುಂ, ಆರೋಗ್ಯ ಪರೀಕ್ಷಕ ಅಶೋಕ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: