ಮೈಸೂರು

ಸ್ಟ್ರಾಂಗ್ ರೂಂ ಸೇರಿದ ರತ್ನ ಖಚಿತ ಸಿಂಹಾಸನ

ದರ್ಬಾರ್  ಹಾಲ್‌ನಲ್ಲಿ ರಾರಾಜಿಸುತ್ತಿದ್ದ ಸಿಂಹಾಸನವನ್ನು ಅರಮನೆಯ ನೆಲಮಾಳಿಗೆಯಲ್ಲಿರುವ ಸ್ಟ್ರಾಂಗ್ ರೂಮ್ ಅಲ್ಲಿ ಭದ್ರವಾಗಿರಿಸಲಾಗಿದೆ.

ನವರಾತ್ರಿ ಉತ್ಸವದಲ್ಲಿ ದರ್ಬಾರ್ ಮಾಡಿಸಿಕೊಂಡಿದ್ದ ಸಿಂಹಾಸನಕ್ಕೆ ಬೀಗ ಹಾಕಿ ಬೀಗವನ್ನು ಸಹ ಸೀಜ಼್ ಮಾಡಲಾಗಿದೆ. ಇನ್ನು ಮುಂದಿನ ವರ್ಷದ ನವರಾತ್ರಿಯ ಸಂದರ್ಭ ಈ ಸಿಂಹಾಸನವನ್ನು ಹೊರತೆಗೆಯಲಾಗುತ್ತದೆ. ಸಿಂಹಾಸನ ಸ್ಟ್ರಾಂಗ್ ರೂಂ ಸೇರುವವರೆಗೂ ದರ್ಬಾರ್ ಹಾಲ್‌‌ನಲ್ಲಿ ಹಾಕಲಾಗಿರುವ ಸಿ.ಸಿ. ಟಿ.ವಿ.ಯನ್ನು ಸಹ ಆಫ್ ಮಾಡಲಾಗಿತ್ತು.

ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಬಳಿಕ ಹೋಮ ಹವನಗಳ ಜೊತೆಗೆ ಅರಮನೆಯ ನಾಲ್ಕು ಜನ ಸಿಬ್ಬಂದಿ ಹಾಗೂ ಗೆಜ್ಜಗಳ್ಳಿ ಗ್ರಾಮದ ಮುಖಂಡರು ಸಿಂಹಾಸನವನ್ನು ಬಿಡಿ ಬಿಡಿಯಾಗಿ ಬಿಚ್ಚಿಟ್ಟರು.

ಸೆಪ್ಟೆಂಬರ್ 25 ರಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ಬಳಿಕ ಸಿಂಹಾಸನ ಮತ್ತು ಬೆಳ್ಳಿ ಭದ್ರಸನದ ಜೋಡಣಾ ಕಾರ್ಯ ನಡೆದಿತ್ತು. ಈ ಬಾರಿ ನವರಾತ್ರಿ ಸೇರಿದಂತೆ ಎರಡು ದಿನ ಹೆಚ್ಚಿನದಾಗಿ ಯದುವೀರ್ ಕೃಷ್ಣದತ್ತ ಚಾಮಾರಾಜ ಒಡೆಯರ್ ಅವರು ಬೆಳಗ್ಗೆ ಮತ್ತು ಸಂಜೆ ಖಾಸಗಿ ದರ್ಬಾರ್ ನಡೆಸಿದ್ದರು.

Leave a Reply

comments

Related Articles

error: