ಮೈಸೂರು

ಆ.10ರಂದು ಚಾಮರಾಜೇಂದ್ರ ಮೃಗಾಲಯ 125ನೇ ವಾರ್ಷಿಕೋತ್ಸವ

ಮೈಸೂರು,ಆ.8 : ಚಾಮರಾಜೇಂದ್ರ ಮೃಗಾಲಯದ 125ನೇ ವಾರ್ಷಿಕೋತ್ಸವ ಮತ್ತು ವನ್ಯರಂಗ ಮಂದಿರ ಉದ್ಘಾಟನಾ ಸಮಾರಂಭವನ್ನು ಆ.10ರ ಮಧ್ಯಾಹ್ನ 3.30ಕ್ಕೆ ಮೃಗಾಲಯದ ಆವರಣದಲ್ಲಿರುವ ವನ್ಯರಂಗ ಮಂದಿರದಲ್ಲಿ ನಡೆಯುವುದು.

ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಚಿವರಾದ ಬಿ.ರಮಾನಾಥ್ ರೈ ಹಾಗೂ ತನ್ವೀರ್ ಸೇಠ್ ಭಾಗವಹಿಸುವರು.

ಶಾಸಕ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಮೇಯರ್ ಎಂ.ಜೆ.ರವಿಕುಮಾರ್, ಉಪಸಭಾಪತಿ ಮರಿತಿಬ್ಬೇಗೌಡ, ಜಿ.ಪಂ. ಅಧ್ಯಕ್ಷ ನಯಿಮಸುಲ್ತಾನ ನಜೀರ್ ಅಹಮದ್, ಸಂಸದರಾದ ಪ್ರತಾಪ ಸಿಂಹ, ಆರ್.ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು ಮೊದಲಾದವರು ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: