ಪ್ರಮುಖ ಸುದ್ದಿಮೈಸೂರು

ಕೆಎಸ್‍ಒಯು ವ್ಯವಸ್ಥಾಪನಾ ಮಂಡಳಿ: ಪ್ರೊ. ರಂಗಪ್ಪ ಸದಸ್ಯತ್ವ ರದ್ದು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯಿಂದ ಮೈಸೂರು ವಿವಿಯ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರ ಸದಸ್ಯತ್ವ ಹಿಂದಕ್ಕೆ ಪಡೆಯಲಾಗಿದೆ. ಪ್ರೊ. ರಂಗಪ್ಪ ಅವರ ಸ್ಥಾನಕ್ಕೆ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಎಂ.ಎಸ್. ಸುಭಾಷ್ ಅವರನ್ನು ನೇಮಕ ಮಾಡಿ ಅ.18ರಂದು ಆದೇಶ ಪತ್ರ ಕಳುಹಿಸಲಾಗಿದೆ.

ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎನ್. ವೀರಬ್ರಹ್ಮಚಾರಿ ಅವರು ಮುಕ್ತ ವಿವಿ ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ಅವರಿಗೆ ಆದೇಶ ನೀಡಿದ್ದಾರೆ. ಪ್ರೊ.ರಂಗಪ್ಪ ಅವರ ವ್ಯವಸ್ಥಾಪನಾ ಮಂಡಳಿ ಸದಸ್ಯತ್ವವನ್ನು ಹಿಂದಕ್ಕೆ ಪಡೆದಿರುವ ಬಗ್ಗೆ ಆದೇಶ ಪತ್ರದಲ್ಲಿ ಯಾವುದೇ ಕಾರಣ ನೀಡಿಲ್ಲ.

ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ಅವರು ಮೈಸೂರು ವಿವಿಯ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹಾಗೂ ಕುಲಸಚಿವ ಪ್ರೊ. ಪಿ.ಎಸ್. ನಾಯಕ್ ಹಾಗೂ ಕ.ರಾ.ಮು.ವಿ. ಯ ಇತರೆ ಏಳು ಮಂದಿಯ ಅಧಿಕಾರ ದುರುಪಯೋಗ ಹಾಗೂ ವಂಚನೆ ಪ್ರಕರಣದ ವಿರುದ್ಧ ರಾಜ್ಯಪಾಲರ ಆದೇಶದಂತೆ ಈಗಾಗಲೇ ಇವರ ಮೇಲೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರ ಸ್ಥಾನದಲ್ಲಿರುವ ಇವರಿಂದ ದಾಖಲೆ ಹಾಗೂ ಸಾಕ್ಷಿಗಳು ನಾಶವಾಗಲಿವೆ. ಈ ಕೂಡಲೇ ಇವರನ್ನು ವಜಾಗೊಳಿಸಬೇಕೆಂದು ಈ ಹಿಂದೆ ಆಗ್ರಹಿಸಿದ್ದರು.

Leave a Reply

comments

Related Articles

error: