ಮೈಸೂರು

ಹೆಣ್ಣಾನೆ ಸಾವು

ಯಳಂದೂರು: ನಾಲ್ಕು ವರ್ಷದ ಹೆಣ್ಣಾನೆಯ ಮೃತದೇಹವು ದೊಡ್ಡಹಳ್ಳಿ ಆರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಆನೆಯು ಸಹಜ ಸಾವನಪ್ಪಿದೆ ಎಂದು ತಿಳಿದು ಬಂದೆ. ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಹೆಣ್ಣಾನೆಯ ಮೃತ ದೇಹ ಪತ್ತೆಯಾಗಿದ್ದು, ಅರಣ್ಯಾಧಿಕಾರಿ ನಾಗರಾಜು ಅವರ ಗಮನಕ್ಕೆ ತರಲಾಗಿದೆ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವ ಪರೀಕ್ಷೆ ನಡೆಸಿದ ಪಶುವೈದ್ಯ ನಾಗರಾಜ ಅವರು ಸುಮಾರು ಮೂರರಿಂದ ನಾಲ್ಕು ವರ್ಷದೊಳಗಿರುವ ಹೆಣ್ಣಾನೆಯ ಸಾವು ಸಹಜ ಸಾವೆಂದು ಘೋಷಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಪ್ರಭುಸ್ವಾಮಿ, ಸಿಬ್ಬಂದಿಗಳಾದ ಮಲ್ಲಪ್ಪ, ಹುಚ್ಚಣ್ಣ ಪರಮೇಶ್, ರಮೇಶ್ ಹಾಗೂ ಇತರರು ಹಾಜರಿದ್ದರು.

 

Leave a Reply

comments

Related Articles

error: