ಮೈಸೂರು

ಜೆಡಿಎಸ್ ಮುಖಂಡ ಎಂ.ಸಿ. ಸುಂದರೇಶನ್ ವಿಧಿವಶ

ಮೈಸೂರು,ಆ.9:-ಜೆಡಿಎಸ್ ಮುಖಂಡ ಎಂ.ಸಿ. ಸುಂದರೇಶನ್ ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಇವರಿಗೆ ಎಪ್ಪತ್ತು ವರ್ಷ ವಯಸ್ಸಾಗಿತ್ತು.

ಮೈಸೂರು ಕುವೆಂಪುನಗರ ನಿವಾಸಿಯಾಗಿರುವ ಇವರು ಮೈಸೂರು ಜಿಲ್ಲೆ ತಿ. ನರಸೀಪುರದಲ್ಲಿ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸಚಿವ ಮಹದೇವಪ್ಪ ವಿರುದ್ಧ ಕೇವಲ 150 ಮತಗಳ ಅಂತರದಿಂದ ಸೋತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬುಧವಾರ ಮುಂಜಾನೆ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: