ಮೈಸೂರು

ಪರಿಸರ ಸ್ನೇಹಿ ಗಣೇಶಮೂರ್ತಿ ಜಾಗೃತಿ ಜಾಥಾ

ಸರಸ್ವತಿಪುರಂನಲ್ಲಿರುವ ರೋಟರಿ ವೆಸ್ಟ್ ಸ್ಕೂಲ್ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶ ಮೂರ್ತಿ ಕುರಿತು ಜಾಗೃತಿ ಮೂಡಿಸಿದರು.

ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಹಿಡಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸರಸ್ವತಿಪುರಂ ಸುತ್ತಮುತ್ತ, ಟಿ.ಕೆ. ಲೇ ಔಟ್, ಜನತಾನಗರ, ಗಂಗೋತ್ರಿ ಮೂಲಕ ಮೆರವಣಿಗೆಯಲ್ಲಿ ಸಾಗಿದರು.

3

ಹಾನಿಕಾರಕ ರಾಸಾಯನಿಕಯುಕ್ತ ಬಣ್ಣಹಚ್ಚಿದ ಗಣೇಶನ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಿಸುವುದು ಪರಿಸರಕ್ಕೆ ಹಾನಿಕರ.  ಈ ಕಾರಣದಿಂದ ಜನತೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೇ ಪೂಜೆ ಮಾಡಿ ವಿಸರ್ಜನೆ ಮಾಡಬೇಕು ಎಂದು ಕರೆ ನೀಡಿದರು.

ರ್ಯಾಲಿಯಲ್ಲಿ ರೋಟರಿ ವೆಸ್ಟ್ ಅಸೋಸಿಯೇಶನ್ ಉಪಾಧ್ಯಕ್ಷ ಪದ್ಮನಾಭ, ಅಧ್ಯಕ್ಷ ಹನಮಂತು ಸಿ.ಆರ್, ಕಾರ್ಯದರ್ಶಿ ನಾಗೇಂದ್ರ ಕುಮಾರ್, ಡಾ.ನಿಂಗಯ್ಯ, ಖಜಾಂಚಿ ರೇವತಿ ರೆಡ್ಡಿ, ಮುಖ್ಯೋಪಾಧ್ಯಾಯಿನಿ ರೇಣುಕಾ. ಸಿ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.

1

Leave a Reply

comments

Related Articles

error: