ಮೈಸೂರು

ತಲೆ-ಕೈ-ಕಾಲಿಲ್ಲದ ಮಗುವಿನ ಮೃತದೇಹ ಪತ್ತೆ

img-20161021-wa0006
ತಲೆ, ಒಂದು ಕೈ, ಒಂದು ಕಾಲು ಕತ್ತರಿಸಿರುವ ಮಗುವಿನ ದೇಹ.

ಮೈಸೂರಿನ ಎನ್.ಆರ್.ಮೊಹಲ್ಲಾ ವ್ಯಾಪ್ತಿಯ ಗಾಂಧಿನಗರ ಬಡಾವಣೆಯಲ್ಲಿ ಗುರುವಾರ ರಾತ್ರಿ ತಲೆ, ಒಂದು ಕೈ, ಒಂದು ಕಾಲಿಲ್ಲದ ಒಂದೂವರೆ ವರ್ಷದ ಮಗುವಿನ ಮೃತದೇಹ ಪತ್ತೆಯಾಗಿದೆ.

ಗುರುವಾರ ರಾತ್ರಿ ಗಾಂಧಿನಗರ ಬಡಾವಣೆಯಲ್ಲಿ ನಾಲ್ಕೈದು ನಾಯಿಗಳು ಒಂದೇ ಸಮನೆ ಕಚ್ಚಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ಅಲ್ಲಿ ತಲೆ, ಒಂದು ಕೈ, ಒಂದು ಕಾಲು ಇಲ್ಲದ ಮಗುವಿನ ಮೃತದೇಹ ಗೋಚರಿಸಿದ್ದು, ಅವರನ್ನು ಆತಂಕಿತರನ್ನಾಗಿಸಿದೆ.

ತಕ್ಷಣವೇ ಸ್ಥಳಿಯರು ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣೆಗೆ ವಿಷಯ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಯಾವುದಾದರೂ ಮಗು ನಾಪತ್ತೆ ಪ್ರಕರಣ ದಾಖಲಿಸಲಾಗಿದೆಯೇ ಎನ್ನುವ ಕುರಿತು ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ. ಮೃತ ಮಗುವಿನ ದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ವಾಮಾಚಾರಕ್ಕೇನಾದರೂ ಈ ಮಗುವನ್ನು ಬಳಸಿಕೊಳ್ಳಲಾಗಿದೆಯೇ ಎನ್ನುವ ಅನುಮಾನ ಸ್ಥಳೀಯರಲ್ಲಿ ಮೂಡಿಬಂದಿದ್ದು, ಅತಂಕವನ್ನು ಹೆಚ್ಚಿಸಿ ಅವರ ನಿದ್ದೆಗೆಡಿಸಿದೆ. ಸ್ಥಳಕ್ಕೆ ಪೊಲೀಸ್ ಇನ್ಸಪೆಕ್ಟರ್ ಅಶೋಕ್ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ.

Leave a Reply

comments

Related Articles

error: