ಮೈಸೂರು

ರಸ್ತೆ ತಡೆ ಪ್ರತಿಭಟನೆಗೆ ಮುಂದಾಗಿದ್ದ ರೈತರ ಬಂಧನ

ಮೈಸೂರು,ಆ.9:- ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ದೇಶಾದ್ಯಂತ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಬಂದ್ ಚಳುವಳಿಗೆ ಕರೆ ನೀಡಿದ್ದು, ಮೈಸೂರು ಜಿಲ್ಲೆಯ ವಿವಿಧೆಡೆಗಳಲ್ಲೂ ರೈತರು ಪ್ರತಿಭಟನೆ ನಡೆಸಿದರು.
ಕೆ.ಆರ್ ನಗರದಲ್ಲಿ ರಸ್ತೆ ತಡೆ ಪ್ರತಿಭಟನೆಗೆ ಮುಂದಾದ ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್ ನಗರ ಪಟ್ಟಣದ ಕೃಷ್ಣರಾಜ ವೃತ್ತದಲ್ಲಿ ರಸ್ತೆ ತಡೆ ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಬಂಧಿಸಿ  ಪೊಲೀಸರು ಕರೆದೊಯ್ದಿದ್ದಾರೆ. ರೈತರ ಕೃಷಿ ಸಾಲಮನ್ನಾ
ಮಾಡಬೇಕು, ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು, ರಾಜ್ಯದ ಪ್ರಮುಖ ಜಲಾಶಯಗಳಿಂದ ಅಚ್ಚುಕಟ್ಟು ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು, ಮಹದಾಯಿ ನದಿ ನೀರಿನ ಯೋಜನೆಯ ಆರಂಭಕ್ಕೆ ತಕ್ಷಣ ಕೈಗೊಳ್ಳಬೇಕೆಂದು ಒತ್ತಾಯಿಸಿ  ಹೆದ್ದಾರಿ ಬಂದ್ ಚಳುವಳಿ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಕಿಸಾನ್ ಮಹಾಸಂಘದ ವತಿಯಿಂದ ಕರೆ ನೀಡಿದ್ದ ಹೆದ್ದಾರಿ ಬಂದ್ ಚಳುವಳಿಯಲ್ಲಿ ದೇಶಾದ್ಯಂತ 153ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: