ಪ್ರಮುಖ ಸುದ್ದಿಮೈಸೂರು

ಪಾಲಿಕೆ ಸದಸ್ಯರ ವೇತನದ ಜೊತೆ ಅಧಿಕಾರ ವ್ಯಾಪ್ತಿ ಹೆಚ್ಚಳಕ್ಕೆ ಬೇಡಿಕೆ

mysore-palike-2
ಮೇಯರ್ ಬಿ.ಎಲ್. ಭೈರಪ್ಪ

ಶಾಸಕರ ವೇತನ ಹೆಚ್ಚಳವಾದ ಕೆಲ ತಿಂಗಳಲ್ಲೇ ಇದೀಗ ಮೈಸೂರು ಪಾಲಿಕೆ ಸದಸ್ಯರಿಗೂ ಸರ್ಕಾರದಿಂದ ದೀಪಾವಳಿಯ ಬಂಪರ್ ಆಫರ್ ಸಿಕ್ಕಿದೆ. ತಿಂಗಳಿಗೆ ಮೂರು ಸಾವಿರ ಗೌರವ ಧನ ಪಡೆಯುತ್ತಿದ್ದ ಮೈಸೂರು ಪಾಲಿಕೆ ಸದಸ್ಯರಿಗೆ ಬರೋಬ್ಬರಿ ಎರಡು ಸಾವಿರ ರೂ. ಏರಿಕೆ ಮಾಡಲಾಗಿದೆ.
ಪಾಲಿಕೆ ಸದಸ್ಯರ ಗೌರವ ಧನ ಮೂರು ಸಾವಿರದಿಂದ 5 ಸಾವಿರಕ್ಕೆ ಏರಿಕೆಯಾಗಿದೆ. ಗೌರವಧನ ಹೆಚ್ಚಾಗಿದ್ದರೂ ಪಾಲಿಕೆ ಸದಸ್ಯರಿಗೆ  ಸಂತಸವಾಗಿಲ್ಲ. ನಮಗೆ ನಮ್ಮ ಕಾರ್ಯವ್ಯಾಪ್ತಿಯ ಅಧಿಕಾರ ಕೊಟ್ಟರೆ ಚೆನ್ನಾಗಿತ್ತು. ಅದನ್ನು ಬಿಟ್ಟು ಗೌರವಧನ ಹೆಚ್ಚು ಮಾಡಿದ್ದಾರೆ. ನಮ್ಮ ವ್ಯಾಪ್ತಿಯ ಜನರಿಗೆ ನಾವು ಶಾಸಕರಿಗಿಂತ ಹೆಚ್ಚಿನ ಸೇವೆ ನೀಡುತ್ತೇವೆ. ಆದರೆ ನಮಗೆ ಯಾವುದೇ ಅಧಿಕಾರ ನೀಡಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸರ್ಕಾರ ಮಾಡಿರೋ ಗೌರದ ಧನ ಹೆಚ್ಚಳ ಸಂತಸವೇ. ಆದರೆ ಪಾಲಿಕೆ ಸದಸ್ಯರ ಅಧಿಕಾರ ವ್ಯಾಪ್ತಿ ಹೆಚ್ಚಳ ಆಗಿದ್ದರೆ ಇನ್ನಷ್ಟು ಸಂತಸವಾಗುತ್ತಿತ್ತು. ಆದರೂ ಉಸಿರಾಡುವಷ್ಟು ಸಂತಸವಾಗಿದೆ ಎಂದು ಮೇಯರ್ ಬಿ.ಎಲ್. ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಗೌರವ ಧನ ಹೆಚ್ಚಳಕ್ಕಿಂತ ನಮ್ಮ ಗೌರವ ಹೆಚ್ಚಿಸುವ ಕೆಲಸ ಮಾಡಿದ್ದರೆ ಖುಷಿಯಾಗುತ್ತಿತ್ತು. ನಮ್ಮ ಕೆಲಸ ಏನು ಎಂಬುದು ನಮ್ಮ ವಾರ್ಡ್ ಮತದಾರರಿಗೆ ಗೊತ್ತು ಎಂದು ವಾರ್ಡ್ ನಂಬರ್ 14ರ ಬಿಜೆಪಿ ಪಾಲಿಕೆ ಸದಸ್ಯ ಜಗದೀಶ್ ಪ್ರತಿಕ್ರಿಯಿಸಿದ್ದಾರೆ.

Leave a Reply

comments

Related Articles

error: