ಮೈಸೂರು

ಸಾರ್ವಜನಿಕರಲ್ಲಿ ವೈಜ್ಞಾನಿಕ ಅರಿವು ಮೂಡಿಸಿದ ವಿಜ್ಞಾನಕ್ಕಾಗಿ ಭಾರತ ನಡಿಗೆ

ಮೈಸೂರು, ಆ.೯: ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ಬುಧವಾರ ವಿಜ್ಞಾನಕ್ಕಾಗಿ ಭಾರತ ನಡಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಾಥಾಗೆ ರಾಮಸ್ವಾಮಿ ವೃತ್ತದ ಬಳಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿಜ್ಞಾನಕ್ಕಾಗಿ ನಡಿಗೆ ಕಾರ್ಯಕ್ರಮ ದೇಶದ ೩೬ ನಗರಗಳಲ್ಲಿ ಮತ್ತು ಕರ್ನಾಟಕ ೮ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೂಢನಂಬಿಕೆ, ಕಂದಾಚಾರ ಸೇರಿದಂತೆ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕಾರ್ಯಗಳು ಹೆಚ್ಚುತ್ತಿದ್ದು ಅವುಗಳನ್ನು ದೂರ ಮಾಡಿ ಸಾರ್ವಜನಿಕರಲ್ಲಿ ವಿಜ್ಞಾನದ ಅರಿವು ಮೂಡಿಸುವ ಸಲುವಾಗಿ ಜಾಥಾ ಆಯೋಜಿಸಲಾಗಿದೆ. ವೈಜ್ಞಾನಿಕ ಮನೋಭಾವ ಬೆಳೆಸುವುದೇ ನಮ್ಮ ಉzಶ ಎಂದು ಹೇಳಿದರು.
ಜಾಥಾ ರಾಮಸ್ವಾಮಿ ವೃತ್ತದಿಂದ ಆರಂಭಗೊಂಡು ವಿಶ್ವಮಾನವ ಉದ್ಯಾನವನದ ಕುವೆಂಪು ಪ್ರತಿಮೆಯವರೆಗೆ ಸಾಗಿ ಅಂತ್ಯಗೊಂಡಿತು. ಬಾಲವಿಜ್ಞಾನ ಪತ್ರಿಕೆಯ ಪ್ರಧಾನ ಸಂಪಾದಕಿ ಶ್ರೀಮತಿ ಹರಿಪ್ರಸಾದ್, ನಿವೃತ್ತ ಕೃಷಿ ವಿಜ್ಞಾನಿ ಡಾ.ಎಂ.ಎಂ.ಶೆಣೈ, ಪರಿಸ ಹೋರಾಟಗಾರ ಮತ್ತು ಲೇಖಕ ಡಾ.ಎಸ್.ಜಿ.ಒಂಬತ್ಕೆರೆ, ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ಸಂಘಟಕಿ ಡಾ.ಸುಧಾ, ಸಬೀನಾ, ಸುನೀಲ್ ಸೇರಿದಂತೆ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: