ಮೈಸೂರು

ಆ.11ರಂದು ಸಾರ್ಥಕ ಸಾಧಕ ಸಿದ್ದರಾಮಯ್ಯ-70 ಅವಲೋಕನಾ ಕಾರ್ಯಕ್ರಮ

ಮೈಸೂರು,ಆ.9 : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಅಭಿಮತ’ದಿಂದ ಆ.11ರಂದು ಸಾರ್ಥಕ ಸಾಧಕ ಸಿದ್ದರಾಮಯ್ಯ-70 ಅವಲೋಕನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಭಿಮತದ ಪ್ರಧಾನ ಸಂಚಾಲಕ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಅಂದು ಬೆಳಗ್ಗೆ 11ಕ್ಕೆ ಆರ್ಥಿಕ ತಜ್ಞ ಮುಂಬೈನ ಪ್ರೊ.ಬಾಲಚಂದ್ರ ಮುಂಗೇಕರ್ ಉದ್ಘಾಟಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಎಂ ಸಿದ್ದರಾಮಯ್ಯನವರ ಸೈದ್ಧಾಂತಿಕ ಸೆಳೆತ ಮತ್ತು ಪ್ರಭಾವ ಕುರಿತು ಪ್ರೋ.ಕಾಳೇಗೌಡ ನಾಗವಾರ, ವೈಶಿಷ್ಠ ಪೂರ್ಣ ರಾಜಕಾರಣಿ ಕುರಿತು ಡಾ.ಬಿ.ಎಲ್.ಶಂಕರ್, ರಾಜಕೀಯ ಸವಾಲುಗಳು ಕುರಿತು ಪ್ರೊ.ರವೀಂದ್ರ ರೇಷ್ಮೆ, ದಿಟ್ಟ ಆಡಳಿತಗಾರ ಕುರಿತು ಡಾ.ಹೆಚ್.ಸಿ.ಮಹದೇವಪ್ಪ, ಯುವ ರಾಜಕಾರಣದ ಆದರ್ಶ ಮತ್ತು ಆಧ್ಯತೆ ಕುರಿತು ದಿನೇಶ್ ಅಮೀನ್ ಮಟ್ಟು ಮಾತನಾಡಲಿದ್ದಾರೆ ಎಂದು ಹೇಳಿದರು.

ಸಾಹಿತಿ ದೇವನೂರ ಮಹದೇವ, ಪ್ರೋ.ಸಿ.ಪಿ.ಸಿದ್ಧಾಶ್ರಮ, ಪ.ಮಲ್ಲೇಶ್, ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಮುಖ್ಯಮಂತ್ರಿಗಳ ಬದುಕು ಮತ್ತು ಸಾಧನೆ ಹೆಜ್ಜೆಗಳ ಸಾಕ್ಷಾ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸಂಸ್ಥೆಯ ಪ್ರೊ.ನಯಮೂರ್ ರೆಹಮಾನ್, ಡಾ.ಮೃತ್ಯುಂಜಯ, ಆರ್ ವಾಸುದೇವ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: