ಮೈಸೂರು

ಗುಜರಾತ್ ನಲ್ಲಿ ರಾಜ್ಯಸಭೆ ಗೆಲುವು : ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಮೈಸೂರು,ಆ.9:-  ಗುಜರಾತ್ ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಅಹ್ಮದ ಪಟೇಲ್  ಜಯಗಳಿಸಿದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಸಿಹಿಹಂಚಿ ಸಂಭ್ರಮಿಸಿದರು.

ನಗರ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಟಿ.ಎಸ್‌. ರವಿಶಂಕರ್, ಡಾ.ಸುಜಾತ.ಎಸ್‌. ರಾವ್,ಶ್ರೀನಿವಾಸ್,ಡೈರಿ ವೆಂಕಟೇಶ್, ಶ್ರೀಮತಿ ವೀಣಾ,ಬ್ರಾಡ್ವೇ ಕಿರಣ್,ಹಾಗು ಪಕ್ಷದ ಕಾರ್ಯಕರ್ತರು ನ್ಯಾಯಾಲಯದ ಮುಂಭಾಗದಲ್ಲಿ ಸಿಹಿಯನ್ನು ಮತ್ತು ಹಸಿರು ಗಿಡದ ಸಸಿಗಳನ್ನು ನೀಡಿ ಸಂಭ್ರಮಾಚರಣೆಯನ್ನು ಆಚರಿಸಿದರು.  ವಿಜಯಕ್ಕೆ ಕಾರಣರಾದ ಇಂಧನ ಸಚಿವ, ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಕೋರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: