ದೇಶ

ಜಯಲಲಿತಾ ಆರೋಗ್ಯದಲ್ಲಿ ಸುಧಾರಣೆ, ಶೀಘ್ರ ಮನೆಗೆ: ಎಐಎಡಿಎಂಕೆ

ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಬಂದಿದ್ದು, ಶೀಘ್ರವೇ ಡಿಸ್ಚಾರ್ಜ್‍ ಆಗಿ ಮನೆಗೆ ತೆರಳಲಿದ್ದಾರೆ ಎಂದು ಎಐಎಡಿಎಂಕೆ ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಜಯಲಲಿತಾ ಅವರು ಕುಳಿತುಕೊಂಡು ಸನ್ನೆಯ ಮೂಲಕ ಮಾತನಾಡುತ್ತಿದ್ದಾರೆ. ಅವರಿಗೆ ಅಳವಡಿಸಲಾಗಿರುವ ಟ್ಯೂಬ್‍ ಅನ್ನು ತೆಗೆದ ಬಳಿಕಷ್ಟೇ ಮಾತನಾಡಲು ಸಾಧ್ಯ ಎಂದು ವಕ್ತಾರೆ ಸರಸ್ವತಿ ಅವರು ಹೇಳಿದ್ದಾರೆ.

ಅಪೋಲೋ ಆಸ್ಪತ್ರೆಯಿಂದ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಸುದ್ದಿ ಬಂದಿಲ್ಲ. ಆದರೆ, ಎಐಎಡಿಎಂಕೆ ಪಕ್ಷ ಮಾತ್ರ ಜಯಲಲಿತಾ ಅವರು ಗುಣಮುಖರಾಗುತ್ತಿದ್ದು, ಶೀರ್ಘ ಮನೆಗೆ ತೆರಳಲಿದ್ದಾರೆ ಎಂದು ಹೇಳಿಕೆ ನೀಡಿದೆ.

Leave a Reply

comments

Related Articles

error: