ಪ್ರಮುಖ ಸುದ್ದಿ

ಡಿಕೆಶಿ ಮೇಲಿನ ಐಟಿ ದಾಳಿಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಶಂಕರೇಗೌಡ

ಪ್ರಮುಖ ಸುದ್ದಿ, ಬನ್ನೂರು, ಆ.೯: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆಯ ಮೇಲಿನ ಐಟಿ ದಾಳಿ ಪೂರ್ವಯೋಜಿತವಾಗಿದ್ದು ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಂತಾಗಿದೆ ಎಂದು ಯಾಚೇನಹಳ್ಳಿ ಕೃಷಿ ಪತ್ತಿ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ತಿಳಿಸಿದರು.
ಪಟ್ಟಣ ಸಮೀಪದ ಯಾಚೇನಹಳ್ಳಿ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕರೆಯಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿ ರಾಜಕೀಯ ಕುತಂತ್ರದಲ್ಲಿ ನಡೆದಿದೆ ಎಂದ ಅವರು ಒಬ್ಬ ಧೀಮಂತ ರಾಜಕೀಯ ನಾಯಕ ನಾಗುವ ವ್ಯಕ್ತಿಯ ಮೇಲೆ ಸಂಚು ರೂಪಿಸಿ ದಾಳಿ ಮಾಡುವ ಮೂಲಕ ಅವರ ವರ್ಚಸ್ಸನ್ನು ಕಡಿಮೆ ಮಾಡುವ ಉzಶ ದಾಳಿಯ ಹಿಂದಿತ್ತೇನೋ ಎಂದು ಅನುಮಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಗುಜರಾತ್‌ನ ಶಾಸಕರ ನೋಡಿಕೊಳ್ಳುವ ಜವಾಬ್ದಾರಿಯನ್ನು ಸವಾಲಾಗಿಯೇ ಸ್ವೀಕರಿಸಿ ಗುಜರಾತ್ ಶಾಸಕರ ಜೊತೆ ಸಮಾಲೋಚನೆಯಲ್ಲಿರುವಾಗಲೇ ಐಟಿ ದಾಳಿ ಮಾಡಿರುವುದು ರಾಜಕೀಯ ತಂತ್ರಗಾರಿಕೆಯನ್ನು ಎತ್ತಿ ತೋರಿಸುತ್ತದೆ. ಡಿ.ಕೆ.ಶಿವಕುಮಾರ್ ಯಾವುದೇ ಅಕ್ರಮ ರೀತಿಯಲ್ಲಿ ಹಣ ಸಂಪಾದನೆ ಮಾಡಿಲ್ಲದಿರುವುದನ್ನು ಅವರೇ ಈಗಾಗಲೇ ಸ್ಪಷ್ಟಪಡಿಸಿದ್ದು ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿಯೇ ಉತ್ತರ ಕೊಡಲಿದ್ದಾರೆ ಎಂದರು.
ಯಾಚೇನಹಳ್ಳಿ ರಾಮಕೃಷ್ಣ ಸೇವಾ ಕೇಂದ್ರದ ನಾದಾನಂದನಾಥ ಸ್ವಾಮೀಜಿ, ನಾಡ ಯಜಮಾನ್ ವೈ.ಎಚ್.ಹನುಮಂತೇಗೌಡ, ವೈ.ಎಂ.ಚಂದ್ರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ.ಚಂದ್ರು ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: